ಆತ್ರಾಡಿ ಮಸೀದಿಯಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ
Update: 2020-08-15 20:33 IST
ಉಡುಪಿ, ಆ.15: ಆತ್ರಾಡಿ ಮುಹಿದ್ದೀನ್ ಜುಮಾ ಮಸೀದಿಯಲ್ಲಿ 74ನೆ ಸ್ವಾತಂತ್ರೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಜಮಾತಿನ ಅಧ್ಯಕ್ಷ ಇಸ್ಮಾಯಿಲ್ ಆತ್ರಾಡಿ ನೆರವೇರಿಸಿದರು.
ಖತೀಬ್ ಹನೀಫ್ ದಾರಿಮಿ ದುವಾ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಖಜಾಂಚಿ ಅಬ್ದುಲ್ ರೆಹಮಾನ್ ವನಿಲ, ಸಯ್ಯದ್ ಮದನಿ ಎಕೆಎಂಎಸ್, ಹಾರುನ್ ರಶೀದ್, ಉಮ್ಮರ್, ಇಕ್ಬಾಲ್ ದೇವಿನಗರ, ಮಹಮ್ಮದ್ ಇಸ್ಮಾಯಿಲ್, ಯಂಗ್‌ಮೆನ್ಸ್ ಅಸೋಸಿ ಯೇಶನ್ ಅಧ್ಯಕ್ಷರು ಸದಸ್ಯರು ಹಾಗೂ ಜಮಾತಿನ ಹಾಲಿ ಸದಸ್ಯರು, ಮಾಜಿ ಸದಸ್ಯರೂ, ಮದರಸದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಮ್ಮರ್ ಸ್ವಾಗತಿಸಿ ವಂದಿಸಿದರು.