​ಎಂಆರ್‌ಪಿಎಲ್: ಇಬ್ಬರು ಕಾರ್ಯನಿರ್ವಾಹಕ ನಿರ್ದೇಶಕರ ನೇಮಕ

Update: 2020-08-15 15:11 GMT
ಎಲ್ಯಾಂಗೊ, ಪ್ರಸಾದ್

ಮಂಗಳೂರು, ಆ.15: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊಕೆಮಿಕಲ್ಸ್ ಲಿ. (ಎಂಆರ್‌ಪಿಎಲ್) ಸಂಸ್ಥೆಗೆ ಇಬ್ಬರನ್ನು ನೂತನ ಕಾರ್ಯ ನಿರ್ವಾಹಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಎಂಆರ್‌ಪಿಎಲ್‌ನ ರಿಫೈನರಿ ವಿಭಾಗದ ಕಾರ್ಯನಿರ್ವಾಹಕ ನಿದೇಶಕರ ಹುದ್ದೆಗೆ ಎಲ್ಯಾಂಗೊ ಎಂ. ಅವರನ್ನು ನಿಯುಕ್ತಿಗೊಳಿಸಲಾಗಿದೆ. ‘ಪ್ರಾಜೆಕ್ಟ್ಸ್’ ವಿಭಾಗದ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಬಿ.ಎಚ್.ವಿ.. ಪ್ರಸಾದ್ ನೇಮಕಗೊಂಡಿದ್ದಾರೆ ಎಂದು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ (ಸಾಂಸ್ಥಿಕ ಸಂವಹನ) ರುಡಾಲ್ಫ್ ವಿ.ಜೆ. ನರೋನ್ಹ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News