​ಅಕ್ರಮ ಗಾಂಜಾ ಮಾರಾಟ: ಬಾಲಕ ಸಹಿತ ನಾಲ್ವರ ಬಂಧನ

Update: 2020-08-15 15:16 GMT

ಹಿರಿಯಡ್ಕ, ಆ.15: ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸು ತ್ತಿದ್ದ ಬಾಲಕ ಸಹಿತ ನಾಲ್ವರನ್ನು ಹಿರಿಯಡ್ಕ ಪೊಲೀಸರು ಆ.14ರಂದು ಬೆಳಗ್ಗೆ ಆತ್ರಾಡಿ ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ.

ಸುರತ್ಕಲ್ ಚೊಕ್ಕಬೆಟ್ಟುವಿನ ಇಂಝಾಮಾಮುಲ್ ಹಕ್(27), ಕೃಷ್ಣಾಪುರ ಏಳನೇ ಬ್ಲಾಕ್‌ನ ಸೈಫುದ್ದೀನ್(24), ಕೃಷ್ಣಾಪುರ ಐದನೇ ಬ್ಲಾಕ್‌ನ ಆಸೀಫ್ (32) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತ ಆರೋಪಿಗಳು. ಇವರಿಂದ 3 ಲಕ್ಷ ರೂ. ಮೌಲ್ಯದ ಕಾರು, ಅದರಲ್ಲಿದ್ದ ಸುಮಾರು 6000 ರೂ. ಮೌಲ್ಯದ 300 ಗ್ರಾಂ ತೂಕದ ಗಾಂಜಾ ಹಾಗೂ 26 ಸಾವಿರ ರೂ. ಮೌಲ್ಯದ 4 ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News