ಅಪಘಾತ : ಗಾಯಾಳು ಕೊಂಕಣ ರೈಲ್ವೆ ಉದ್ಯೋಗಿ ಮೃತ್ಯು
Update: 2020-08-15 20:47 IST
ಉಡುಪಿ, ಆ.15: ಕುಂದಾಪುರ ತಾಲೂಕಿನ ಬಿಜೂರು ಎಂಬಲ್ಲಿ 2019ರ ಡಿ.12ರಂದು ಬೈಕಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಕೋಮ ಸ್ಥಿತಿಯಲ್ಲಿದ್ದ ಕೊಂಕಣ ರೈಲ್ವೆ ಉದ್ಯೋಗಿ ನಾಗಪ್ಪಎನ್.ಮುಕ್ರಿ(57) ಎಂಬವರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
76 ಬಡಗುಬೆಟ್ಟು ಗ್ರಾಮದ ಮಾರ್ಪಳ್ಳಿ ಎಂಬಲ್ಲಿರುವ ತಮ್ಮ ಮನೆ ಯಲ್ಲಿಯೇ ಆರೈಕೆಯಲ್ಲಿದ್ದ ಇವರು, ಆ.14ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.