ಪಿಎಫ್‌ಐ ಉಡುಪಿ ವಿಭಾಗದಿಂದ ಸ್ವಾತಂತ್ರೋತ್ಸವ ಆಚರಣೆ

Update: 2020-08-15 15:30 GMT

ಉಡುಪಿ, ಆ.15: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ವಿಭಾಗದ ವತಿಯಿಂದ 74ನೆ ಸ್ವಾತಂತ್ರೋತ್ಸವ ದಿನವನ್ನು ಉಡುಪಿಯ ಫ್ರೆಂಡ್ಸ್ ಫೌಂಡೇಶನ್ ಕಚೇರಿಯ ಎದುರುಗಡೆ ಆಚರಿಸಲಾಯಿತು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ನಜೀರ್ ಅಹಮದ್ ಧ್ವಜಾರೋಹಣ ನೆರೆವೇರಿಸಿದರು. ಎಸ್‌ಡಿಪಿಐ ಮುಖಂಡ ರೆಹ್ಮಾನ್ ಮಲ್ಪೆ, ಪಿಎಫ್‌ಐ ಉಡುಪಿ ವಿಭಾಗದ ಅಧ್ಯಕ್ಷ ಬಶೀರ್ ಅಂಬಾಗಿಲು, ಮಜೀದ್ ನಿಟ್ಟೂರು ಉಪಸ್ಥಿತರಿದ್ದರು. ಯಾಸರ್ ಉಡುಪಿ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News