ಹಿರಾ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ

Update: 2020-08-15 17:30 GMT

ಮಂಗಳೂರು : ಹಿರಾ ವಿದ್ಯಾಸಂಸ್ಥೆಯಲ್ಲಿ 74ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.  ಭಾರತಿ ಎಂ.ಆರ್. ಹಿರಾ ಕಾಲೇಜಿನ ಪ್ರಾಂಶುಪಾಲೆ ಧ್ವಜಾರೋಹಣ ಗೈದು " ಮಕ್ಕಳನ್ನು ಎಲ್ಲಾ ಪರಿಸ್ಥಿತಿಯಲ್ಲಿ ದೃತಿಗೆಡದೆ ಉತ್ತಮವಾಗಿ ನಿಭಾಯಿಸುವ ವಾತಾವರಣವನ್ನು ನಿರ್ಮಿಸುವ ಕೆಲಸ ಶಿಕ್ಷಕರಾದ ನಮ್ಮಲ್ಲಿ ಸಾಧ್ಯವಾಗಬೇಕು ಎಂದು ತನ್ನ ಭಾಷಣದಲ್ಲಿ ತಿಳಿಸಿದರು.

" ಇನ್ನೋರ್ವ ಅತಿಥಿ ಸಿ.ಹೆಚ್ ಅಬ್ದುಲ್  ಸಲಾಂ ಜಮಾತ್--ಇಸ್ಲಾಮಿ ಹಿಂದ್ ಇದರ  ಸಮಾಜ ಸೇವಕ ಸಮಿತಿಯ ಸದಸ್ಯರು.  "ಅಂದು ಸ್ವಾತಂತ್ರ್ಯಹೋರಾಟಗಾರರು  ಅನ್ಯಾಯದ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು  ಇಂದು ಯಾರು ನ್ಯಾಯದ ಪರವಾಗಿ ಮಾತನಾಡುತ್ತಾರೆ ಅವರು ಜೈಲು ಸೇರುತ್ತಿದ್ದಾರೆ ಇದು ಬಹಳ ಕೇದಕ ವಿಷಯ "ಎಂದು ತನ್ನ ಭಾಷಣದಲ್ಲಿ ತಿಳಿಸಿದರು.

ದ ಸಬಕರೈಬ್ ಕಿಡ್  ಅಬ್ದುರಹಮನ್ ಇವರನ್ನು  ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಸಂಸ್ಥೆಯ ಕಾರ್ಯದರ್ಶಿ ಕರಿಂ ಅಧ್ಯಕ್ಷೀಯ ಭಾಷಣ ನೆರವೇರಿಸಿಕೊಟ್ಟರು  ಇವರು ತನ್ನ ಭಾಷಣದಲ್ಲಿ" ನಮ್ಮ ದೇಶದ ಪವಿತ್ರಗ್ರಂಥ ವಾದ   ಸಂವಿಧಾನವನ್ನು ಅರಿತುಕೊಳ್ಳಬೇಕು ಅದು ಎಲ್ಲರ ಏಳಿಗೆಯನ್ನು ಬಯಸುತ್ತದೆ. ಅದಕ್ಕೆ ಯಾವುದೇ ಭಾಷೆ, ಜಾತಿ, ಧರ್ಮವಿಲ್ಲ ಸಂವಿಧಾನವನ್ನು  ಅರಿತುಕೊಂಡರೆ ಮಾತ್ರ ಈ ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಸ್ವಾತಂತ್ರ್ಯಸಿಗಲು ಸಾಧ್ಯ. ದೇಶದ ಅಭಿವೃದ್ಧಿಸಾಧ್ಯ" ಎಂದು ಹೇಳಿದರು.

ಅದೇ ಸಂದರ್ಭದಲ್ಲಿ ಸಬಕರೈಬ್ ಕಿಡ್ನ ಅಬ್ದುರಹಮನನನ್ನು ಸನ್ಮಾನಿಸಿ  ಪ್ರೋತ್ಸಾಹಿಸಿದರು. ಶಿಕ್ಷಕಿ ಸಬ್ರಿನ ಸ್ವಾಗತ ಭಾಷಣ ಮಾಡಿದರು ಮುಖ್ಯ ಶಿಕ್ಷಕಿಯಾದ ಗುಲ್ಶನ್ ಧನ್ಯವಾದ ಸಮರ್ಪಣೆಯನ್ನು ಮಾಡಿದರು. ಶಿಕ್ಷಕಿ ಜಿಶ್ರಾರವರು ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News