‘ಕಾಡಿಗೊಂದು ಕಿಟಕಿ’ ಪುಸ್ತಕ ಬಿಡುಗಡೆ

Update: 2020-08-15 17:31 GMT

ಮಂಗಳೂರು, ಆ.15: ಕಥೆಗಾರ ಕೇವಲ ಕಥೆಗಾರನಾದರೆ ಸಾಲದು. ಕಥೆಗೆ ತಕ್ಕುದಾದ ಪ್ರಾದೇಶಿಕ ಭಾಷೆ, ಸಂಸ್ಕೃತಿಯನ್ನು ಅರಿತುಕೊಂಡು ಅದನ್ನು ತನ್ನ ಬರವಣಿಗೆಯಲ್ಲಿ ಮೈಗೂಡಿಸಿಕೊಳ್ಳುವುದು ಕೂಡ ಒಂದು ರೀತಿಯ ಕಲೆ ಎಂದು ಲೇಖಕ, ಸಾಹಿತಿ ಯೋಗೇಶ್ ಮಾಸ್ಟರ್ ಅಭಿಪ್ರಾಯಪಟ್ಟರು.

ಸಂವೇದನ ಪ್ರಕಾಶನ ಸಂಸ್ಥೆಯು ಪ್ರಕಟಿಸಿರುವ, ಯುವ ಲೇಖಕ ಎಂ. ದಾನೀಶ್‌ರವರ ‘ಕಾಡಿಗೊಂದು ಕಿಟಕಿ’ ಕಾದಂಬರಿಯನ್ನು ಝೂಮ್ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಶುಕ್ರವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪತ್ರಕರ್ತ ಎ.ಕೆ. ಕುಕ್ಕಿಲ ಮಾತನಾಡಿದರು. ಸಂವೇದನ ಪ್ರಕಾಶನ ಸಂಸ್ಥೆಯ ಅಧ್ಯಕ್ಷ ನಿಹಾಲ್ ಕಿದಿಯೂರು ಅಧ್ಯಕ್ಷತೆ ವಹಿಸಿದ್ದರು. ಎಂ. ದಾನಿಶ್ ಸ್ವಾಗತಿಸಿದರು. ಅಶೀರುದ್ದೀನ್ ಮಂಜನಾಡಿ ವಂದಿಸಿದರು. ಇರ್ಷಾದ್ ವೇಣೂರು ಕಾರ್ಯಕ್ರಮ ನಿರೂಪಿಸಿದರು. ಶಾಕೀಬ್ ಉಳ್ಳಾಲ್ ವೀಡಿಯೋ ಸಂವಹನಕ್ಕಾಗಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News