×
Ad

ನೇರಳಕಟ್ಟೆ : ಶ್ರೀ ಗಣೇಶೋತ್ಸವ ಸಮಿತಿಯಿಂದ ಸ್ವಾತಂತ್ರ್ಯೋತ್ಸವ

Update: 2020-08-16 17:36 IST

ವಿಟ್ಲ : ನೇರಳಕಟ್ಟೆ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 74 ನೇ ಸ್ವಾತಂತ್ರ್ಯೋತ್ಸವವನ್ನು ಗಣೇಶನಗರದಲ್ಲಿ ಆಚರಿಸಲಾಯಿತು.

ನೆಟ್ಲಮುಡ್ನೂರು ಗ್ರಾಮದ ಕೊರೋನ ವಾರಿಯರ್ಸ್, ಆಶಾ ಕಾರ್ಯಕರ್ತೆ ಮಮತಾ ಮೀನಾವು ದ್ವಜಾರೋಹಣಗೈದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬೋಜನಾರಾಯಣ ಅಧ್ಯಕ್ಷತೆ ವಹಿಸಿದ್ದರು, ಸಮಿತಿಯ ಮಾಜಿ ಗೌರವಾಧ್ಯಕ್ಷ ಅನಂತ ಪ್ರಭು ಸಂದೇಶ ಭಾಷಣಗೈದರು.

ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಲತೀಫ್ ನೇರಳಕಟ್ಟೆ, ನಿವೃತ ಮುಖ್ಯ ಶಿಕ್ಷಕರುಗಳಾದ ರಾಮಚಂದ್ರ ಮಾಸ್ಟರ್, ಲಕ್ಷ್ಮಿ ಟೀಚರ್, ಚಂದ್ರಶೇಖರ, ರಾಜೀವ ಬಿಂದು, ರಾಜೇಶ ಕರುವನ್, ಡಾ. ಗಣರಾಜ ಎಲ್ಕಣ, ರವಿ ನಾಯಕ್, ಪ್ರಶಾಂತ, ಕಿರಣ್, ಶರತ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News