ಉಡುಪಿ : ಮೂರು ದಿನ ಭಾರೀ ಮಳೆ ಸಾಧ್ಯತೆ
Update: 2020-08-16 20:28 IST
ಉಡುಪಿ, ಆ.16: ಮುಂದಿನ ಮೂರು ದಿನಗಳ ಕಾಲ ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಎರಡು ದಿನಗಳ ಕಾಲ ಜಿಲ್ಲೆಯಾದ್ಯಂತ ಕಡಿಮೆಯಾಗಿದ್ದ ಮಳೆಯು ಇಂದು ಸಂಜೆಯಿಂದಲೇ ಮತ್ತೆ ಜೋರಾಗಿ ಸುರಿದಿದೆ. ಅದರಂತೆ ಆ.17ರಿಂದ 19ರವರೆಗೆ ಜಿಲ್ಲೆಯಲ್ಲಿ 65 ಮಿ.ಮೀ. ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯೆಗಳಿವೆ ಎಂದು ಇಲಾಖಾ ವರದಿ ತಿಳಿಸಿದೆ.