ಸೆಂಟ್ರಿಂಗ್ ಕಾರ್ಮಿಕ ಮೃತ್ಯು
Update: 2020-08-16 21:02 IST
ಕಾರ್ಕಳ, ಆ.16: ಎರ್ಲಪಾಡಿ ಗ್ರಾಮದ ಗೋವಿಂದೂರು ನೀರಿನ ಟ್ಯಾಂಕಿನ ಬಳಿ ಸೆಂಟ್ರಿಂಗ್ ಕೆಲಸ ಮಾಡುವ ವೇಳೆ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರನ್ನು ಶಿವಪುರ ದೇವಾಸ್ಥಾನ ಬೆಟ್ಟು ನಿವಾಸಿ ಮಂಜುನಾಥ ದೇವಾಡಿಗ ಎಂದು ಗುರುತಿಸಲಾಗಿದೆ. ಇವರು ಆ.8ರಂದು ಸೆಂಟ್ರಿಂಗ್‌ಗೆ ರಾಡ್ ಕಟ್ ಮಾಡಲು ಅಲ್ಲೇ ಇದ್ದ ಶಿಲೆ ಕಲ್ಲನ್ನು ಎತ್ತುವಾಗ ಕಾಲು ಜಾರಿ ನೆಲಕ್ಕೆ ಬಿದ್ದು ಗಾಯಗೊಂಡಿದ್ದರು. ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಆ.15ರಂದು ಬೆಳಗ್ಗೆ 11.55ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.