ಜುಗಾರಿ: ಮೂವರ ಬಂಧನ
Update: 2020-08-16 21:02 IST
ಅಮಾಸೆಬೈಲು, ಆ.16: ಹೊಸಂಗಡಿ ಗ್ರಾಮದ ಕಾರೂರು ಸರಕಾರಿ ಶಾಲೆಯ ಬಳಿ ಆ.15ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ ಸದಾಶಿವ ಶೆಟ್ಟಿ (35), ಅಣ್ಣಪ್ಪ(32), ಚಂದ್ರಶೇಖರ(39) ಎಂಬವರನ್ನು ಅಮಾಸೆಬೈಲು ಪೊಲೀಸರು ಬಂಧಿಸಿ, 3200ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.