ಮಣಿಪಾಲ: ಮಾಹೆಯಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ
Update: 2020-08-16 21:21 IST
ಮಣಿಪಾಲ, ಆ.16: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ವತಿಯಿಂದ ದೇಶದ 74ನೇ ಸ್ವಾತಂತ್ರೋತ್ಸವವನ್ನು ಶನಿವಾರ ಮಣಿಪಾಲದಲ್ಲಿ ಆಚರಿಸಲಾಯಿತು.
ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಹೆ ಕುಲಪತಿ ಲೆ.ಜ.(ನಿವೃತ್ತ) ಡಾ.ಎಂ.ಡಿ.ವೆಂಕಟೇಶ್ ಸ್ವಾತಂತ್ರೋತ್ಸವ ಸಂದೇಶ ನೀಡಿದರು. ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ.ಎಚ್.ವಿನೋದ್ ಭಟ್, ಪ್ರೊ ವೈಸ್ ಚಾನ್ಸಲರ್ ಡಾ. ಪಿ. ಎಲ್.ಎನ್.ಜಿ.ರಾವ್, ರಿಜಿಸ್ಟ್ರಾರ್ ಡಾ.ನಾರಾಯಣ್ ಸಭಾಹಿತ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ದುಡಿಯುತ್ತಿರುವ ಕೆಎಂಸಿಯ 16 ಮಂದಿ ಕೊರೋನಾ ವಾರಿಯರ್ಸ್‌ನ್ನು ಸನ್ಮಾನಿಸಲಾಯಿತು. ಇವರಲ್ಲಿ ಶೋಭಾ ವಿನಯರಾಣಿ, ಡಾ.ಶಶಿಕಿರಣ್, ಡಾ. ವಂದನಾ ಕೆ.ಇ., ರೋಶಿನಿ, ಡಾ.ಕವಿತಾ ಸರಾವು, ರವೀಂದ್ರ ನಾಯಕ್, ಡಾ. ರವಿರಾಜ್ ಆಚಾರ್ಯ, ವೀಣಾ ನಾಯಕ್ ಮುಂತಾದವರು ಸೇರಿದ್ದರು.