ಸ್ವಾತಂತ್ರ್ಯೋತ್ಸವ: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ ಧ್ವಜಾರೋಹಣ, ದಅ್‌ವಾ ಕಾನ್ಫರೆನ್ಸ್
ಉಳ್ಳಾಲ: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಎಲ್ಲಾ ಯೂನಿಟ್ ಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಎಸ್ ವೈ ಎಸ್ ಉಳ್ಳಾಲ ಸೆಕ್ಟರ್, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಮತ್ತು ಎಸ್ಸೆಸ್ಸೆಫ್ ಮೇಲಂಗಡಿ ಯೂನಿಟ್ ಜಂಟಿ ಆಶ್ರಯದಲ್ಲಿ 9 ಗಂಟೆಗೆ ಮೇಲಂಗಡಿ ಕಚೇರಿ ಮುಂಭಾಗದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ಸದಸ್ಯ ಸಯ್ಯಿದ್ ಖುಬೈಬ್ ತಂಙಳ್ ರವರು ಧ್ವಜಾರೋಹಣ ಮಾಡಿದರು. ಈ ಸಂದರ್ಭ ಸ್ಥಳೀಯ ಕೌನ್ಸಿಲರುಗಳು, ಎಸ್ ವೈ ಎಸ್, ಎಸ್ಸೆಸ್ಸೆಫ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸೆಕ್ಟರ್ ಅಧೀನದ ಎಲ್ಲಾ ಯೂನಿಟ್ ಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಬಳಿಕ ಬೆಳಗ್ಗೆ 9:30ಕ್ಕೆ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ, ರಾಜ್ಯ ಎಸ್ಸೆಸ್ಸೆಫ್ ನ ನಿರ್ದೇಶನದಂತೆ ದಅ್ ವಾ ಕಾನ್ಫರೆನ್ಸ್ (ಸೆಕ್ಟರ್ ಅಧೀನದಲ್ಲಿರುವ ಮುತಅಲ್ಲಿಮರ ಸಂಗಮ) ಕಾರ್ಯಕ್ರಮಕ್ಕೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಸಖಾಫಿ ಉಳ್ಳಾಲ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸದಸ್ಯ ಸೆಯ್ಯಿದ್ ಖುಭೈಬ್ ತಂಗಲ್ ಉದ್ಘಾಟಿಸಿದರು. ಸೆಕ್ಟರ್ ಅಧ್ಯಕ್ಷ ಹಂಝಾ ಯುಬಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಎಸ್ ವೈ ಎಸ್ ಜಿಲ್ಲಾ ಸದಸ್ಯರಾದ ವಿ.ಎ ಮುಹಮ್ಮದ್ ಸಖಾಫಿ, ಬಶೀರ್ ಸಖಾಫಿ ಉಳ್ಳಾಲ, ಜಿಲ್ಲಾ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ರಾಜ್ಯ ಜಮೀಯ್ಯತುಲ್ ಉಲಮಾ ಕಾರ್ಯದರ್ಶಿ ಟಿ.ಎಂ ಮುಹ್ಯಿದ್ದಿನ್ ಕಾಮಿಲ್ ಸಖಾಫಿ ತೋಕೆ ಮುಖ್ಯ ಪ್ರಭಾಷಣ ನಡೆಸಿದರು. ಎಸ್ಸೆಸ್ಸೆಫ್ ಜಿಲ್ಲಾ ಅಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಲ, ಡಿವಿಷನ್ ಪ್ರಧಾನ ಕಾರ್ಯದರ್ಶಿ ಜಾಫರ್ ಯು.ಎಸ್, ಸೆಕ್ಟರ್ ಉಸ್ತುವಾರಿ ಅಲ್ತಾಫ್ ಶಾಂತಿಬಾಗ್, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕಾರ್ಯದರ್ಶಿ ಇಶಾಕ್ ಪೇಟೆ, ನವಾಝ್ ಸಖಾಫಿ ಉಳ್ಳಾಲ, ಎಸ್ ವೈ ಎಸ್ ರಾಜ್ಯ ಸದಸ್ಯರಾದ ಹನೀಫ್ ಹಾಜಿ ಉಳ್ಳಾಲ, ಉಸ್ಮಾನ್ ಸಖಾಫಿ, ಶಬೀರ್ ಪೇಟೆ ಹಾಜರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮುತಲ್ಲಿಮರಿಗೆ ವಸ್ತ್ರ ವಿತರಿಸಲಾಯಿತು ಹಾಗೂ ಸೆಯ್ಯಿದ್ ಜಲಾಲ್ ತಂಙಲ್ ಸಮಾರೋಪ ದುಆ ನೆರವೇರಿಸಿದರು.
ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಮದನಿ ಸ್ವಾಗತಿಸಿ, ವಂದಿಸಿದರು. ಸೆಕ್ಟರ್ ಉಪಾಧ್ಯಕ್ಷ ಹಾಫಿಲ್ ಮುಯೀನ್ ಅಂಜದಿ ನಿರೂಪಿಸಿದರು.