×
Ad

ಜೂಜಾಟ: ಏಳು ಮಂದಿ ಆರೋಪಿಗಳ ಬಂಧನ

Update: 2020-08-16 21:50 IST

ಮಂಗಳೂರು, ಆ.16: ಮೂಡುಶೆಡ್ಡೆಯ ತಿರುವಲೈ ಎಂಬಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಏಳು ಮಂದಿಯನ್ನು ಕಾವೂರು ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ.

ಮೂಡುಶೆಡ್ಡೆ ನಿವಾಸಿಗಳಾದ ತಿಮ್ಮಪ್ಪ ಶೆಟ್ಟಿ (62), ಸಿದ್ದೀಕ್ ಯು., ಸಂತೋಷ್ (34), ಕಿರಣ್ (35), ಮೋಹನ್‌ದಾಸ್ (42), ಪ್ರವೀಣ್, ಅಲ್ತಾಫ್ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ 2,000 ರೂ. ನಗದು, ಮೂರು ಬೈಕ್‌ಗಳು ಸಹಿತ 92 ಸಾವಿರ ರೂ. ವೌಲ್ಯದ ಸೊತ್ತನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿ ನೀಡಲು ಕಮಿಷನರ್ ಮನವಿ: ಮಂಗಳೂರು ನಗರದಲ್ಲಿ ಯಾವುದೇ ರೀತಿಯ ಅಕ್ರಮ ಜೂಜಾಟ ಚಟುವಟಿಕೆಗಳು ನಡೆಯುತ್ತಿರುವುದು ಕಂಡಬಂದಲ್ಲಿ ಪೊಲೀಸರ ಗಮನಕ್ಕೆ ತರಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ‌ಕುಮಾರ್ ತಿಳಿಸಿದ್ದಾರೆ.

ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಶುಗಿರಿ (9480802304), ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್ (9480802305), ನಗರ ಪೊಲೀಸ್ ಕಂಟ್ರೋಲ್ ರೂಂ (9480802321) ನ್ನು ಸಂಪರ್ಕಿಸಲು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News