ರೊಝಾರಿಯೊದಲ್ಲಿ ಸ್ವಾತಂತ್ರ್ಯ ದಿನಾಚರಣೆ
Update: 2020-08-16 21:52 IST
ಮಂಗಳೂರು, ಆ.16: ರೊಝಾರಿಯೊ ಪ್ರೌಢಶಾಲೆಯಲ್ಲಿ 74ನೇ ಸ್ವಾತಂತ್ರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಬಂದರು ವಾರ್ಡ್‌ನ ಮಹಾನಗರ ಪಾಲಿಕೆಯ ಸದಸ್ಯ ಅಬ್ದುಲ್ ಲತೀಫ್ ಧ್ವಜಾರೋಹಣಗೈದರು. ಬಳಿಕ ಮಾತನಾಡಿದ ಅವರು, ನಾವೆಲ್ಲ ಒಗ್ಗಟ್ಟಿನಿಂದ ಸರ್ವ ಸಮಾನತೆಯ ಪ್ರಬುದ್ಧ ಭಾರತವನ್ನು ಕಟ್ಟೋಣ. ಶಾಂತಿ, ಸಹಬಾಳ್ವೆ ಮೂಲ ಮಂತ್ರವಾಗಲಿ ಎಂದು ಶುಭ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಯ ಅಲೋಶಿಯಸ್ ಡಿಸೋಜ, ಸಂತ ಅರ್ಸುಲ ಶಾಲೆಯ ಮುಖ್ಯ ಶಿಕ್ಷಕಿ ಲವೀನಾ ಪಿಂಟೊ, ದೈಹಿಕ ಶಿಕ್ಷಕ ಕಾರಿಯಪ್ಪ ರೈ ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ್ಷಕ ಪ್ರದೀಪ್ ಡಿ.ಎಂ. ಕಾರ್ಯಕ್ರಮ ನಿರೂಪಿಸಿದರು.