ಪ್ರಥಮ ಪಿಯುಸಿ ದಾಖಲಾತಿ ಆರಂಭ : ‘ಆನ್‌ಲೈನ್ ಅಪ್ಲಿಕೇಶನ್’ ಬಳಸಲು ಡಿಕೆಪಿಯುಸಿಎ ಮನವಿ
Update: 2020-08-16 22:10 IST
ಮಂಗಳೂರು, ಆ.16: ಕೋವಿಡ್ ತುರ್ತು ಸಮಯದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ತರಗತಿಗಳಿಗೆ ಜಿಲ್ಲೆಯ ಕಾಲೇಜುಗಳಲ್ಲಿ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, ‘ಆನ್‌ಲೈನ್ ಅಪ್ಲಿಕೇಶನ್’ ತಂತ್ರಾಂಶದ ಮೂಲಕ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ.
ಆ.17ರಿಂದ ಜಿಲ್ಲೆಯ ಕಾಲೇಜಿಗಳಿಗೆ ಪ್ರಥಮ ವರ್ಷಕ್ಕೆ ದಾಖಲಾತಿ ಮಾಡಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸಲು ಗೆ ಲಾಗಿನ್ ಆಗಿ ‘ಆನ್‌ಲೈನ್ ಅಪ್ಲಿಕೇಶನ್’ ಸೌಲಭ್ಯವನ್ನು ಹೊಂದಿರುವ ಕಾಲೇಜುಗಳ ವಿವರ ಹಾಗೂ ಸಹಾಯವಾಣಿಯ ಪಟ್ಟಿಯhttps://apply.dkpucpa.com ಲಿಂಕ್‌ನ್ನು ವೀಕ್ಷಿಸಬಹುದು.
ದಾಖಲಾತಿ ಬಯಸುವ ಯಾವುದೇ ಕಾಲೇಜಿನ ಸಹಾಯವಾಣಿಗೆ ಕರೆಮಾಡಿ ಅರ್ಜಿಯ ಸಂಖ್ಯೆ ಮತ್ತು ‘ಸೆಕ್ಯುರಿಟಿ ಕೋಡ್’ ಪಡೆದು, ದಾಖಲಾತಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ (ಡಿಕೆಪಿಯುಸಿಎ) ಪ್ರಕಟನೆಯಲ್ಲಿ ತಿಳಿಸಿದೆ.