×
Ad

ಆ.20ಕ್ಕೆ ‘ಮಿತಿ’ ಕಾದಂಬರಿ ಬಿಡುಗಡೆ

Update: 2020-08-16 22:14 IST

ಮಂಗಳೂರು, ಆ.16: ಬಿಜೈನ ಭಾರತಿ ನಗರದ ಆ್ಯಡ್ ಐಡಿಯಾದಲ್ಲಿ ಆ.20ರಂದು ಬೆಳಗ್ಗೆ 11:30ಕ್ಕೆ ಪತ್ರಕರ್ತ ಧೀರಜ್ ಪೊಯ್ಯೆಕಂಡ ಅವರ ಕಾದಂಬರಿ ‘ಮಿತಿ’ ಬಿಡುಗಡೆಯಾಗಲಿದೆ.

ಸಾಹಿತಿ ವಿವೇಕಾನಂದ ಕಾಮತ್ ಕಾದಂಬರಿಯನ್ನು ಬಿಡುಗಡೆ ಮಾಡಲಿದ್ದು, ರಶ್ಮಿ ಶರ್ಮ ಕಾದಂಬರಿ ಕುರಿತು ಮಾತನಾಡಲಿದ್ದಾರೆ.

ಹವ್ಯಾಸಿ ಛಾಯಾಗ್ರಾಹಕರಾಗಿರುವ ಧೀರಜ್ ಪೊಯ್ಯೆಕಂಡ ಈವರೆಗೆ ನಾಲ್ಕು ಕಾದಂಬರಿಗಳನ್ನು ರಚಿಸಿದ್ದು, ‘ಮಿತಿ’ ಮೊದಲ ಮುದ್ರಿತ ಕಾದಂಬರಿಯಾಗಿದೆ. ‘ಕನ್ನಡಪ್ರಭ’ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಐವತ್ತಕ್ಕೂ ಹೆಚ್ಚು ಸಣ್ಣ ಕಥೆಗಳನ್ನು ಬರೆದಿದ್ದು, ಕತೆ, ಕವನ, ಚುಟುಕು ರಚನೆಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News