×
Ad

ಎಸ್ಕೆಎಸ್ಸೆಸ್ಸೆಫ್ ಕಿನ್ಯ ಶಾಖೆ ವತಿಯಿಂದ ಸ್ವಾತಂತ್ರೋತ್ಸವ

Update: 2020-08-16 22:29 IST

ಮಂಗಳೂರು : ಎಸ್ಕೆಎಸ್ಸೆಸ್ಸೆಫ್ ಕಿನ್ಯ ಶಾಖೆಯ ವತಿಯಿಂದ ನಡೆದ ಸ್ವಾತಂತ್ರೋತ್ಸವದ ಧ್ವಜರೋಹಣವನ್ನು ಎಸ್ಕೆಎಸೆಸ್ಸೆಫ್ ದ.ಕ.ಜಿಲ್ಲಾಧ್ಯಕ್ಷ ಸೈಯದ ಅಮೀರ್ ತಂಙಳ್ ಅಲ್ ಬುಖಾರಿ ಕಿನ್ಯ ನೆರವೇರಿಸಿದರು.

ಎಸ್ಕೆಎಸೆಸ್ಸೆಫ್ ಕಿನ್ಯ ಶಾಖೆಯ ಅಧ್ಯಕ್ಷ ಇಮ್ರಾನ್ ಅಝ್ಹರಿ ಕಿನ್ಯ ಸ್ವಾಗತಿಸಿದರು. ಸಿದ್ದೀಕ್ ಮುಸ್ಲಿಯಾರ್ ಪ್ರತಿಜ್ಞಾ ವಿಧಿ ಭೋದಿಸಿದರು.‘ ಸ್ವಾತಂತ್ರ್ಯ ಸರ್ವರಿಗೂ ಸಮಾನವಾಗಿರಲಿ’ ಎಂಬ ಘೋಷಣೆಯ ಬಗ್ಗೆ ಎಸ್ಕೆಎಸೆಸ್ಸೆಫ್ ಕ್ಯಾಂಪಸ್ ವಿಂಗ್ ರಾಜ್ಯಾಧ್ಯಕ್ಷ ಇಬ್ರಾಹೀಂ ಬಾತಿಷ್ ಶಂಸಿ ಕೊಡ್ಲಿಪೇಟೆ ಮಾತನಾಡಿದರು.

ಅಬ್ದುಲ್ ಖಾದರ್ ಬಂಟ್ವಾಳ, ಕಿನ್ಯ ಗ್ರಾಪಂ ಸದಸ್ಯ ಫಾರೂಕ್, ಹಮೀದ್ ಪಾಲಡಿ, ಮುಹಮ್ಮದ್ ರಹ್ಮತ್ ನಗರ, ಸ್ಥಳೀಯ ಶಾಲೆಯ ಶಿಕ್ಷಕ ಶರತ್, ಇಬ್ರಾಹೀಂ ಶೇಖ್ ಕುರಿಯಕ್ಕಾರ್ ಮಾತನಾಡಿದರು. ಶಾಹುಲ್ ಹಮೀದ್ ಕಿನ್ಯ ಕಾರ್ಯಕ್ರಮ ನಿರೂಪಿಸಿದರು. ಇರ್ಷಾದ್ ಅಝ್ಹರಿ ಮಿಂಪ್ರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News