ದ.ಕ. ಜಿಲ್ಲೆಯ ಅಲ್ಲಲ್ಲಿ ಸ್ವಾತಂತ್ರೋತ್ಸವ

Update: 2020-08-16 17:06 GMT

ಮಂಗಳೂರು : ದ.ಕ. ಜಿಲ್ಲೆಯ ಅಲ್ಲಲ್ಲಿ ಇರುವ ಕಚೇರಿ, ಸಂಘಸಂಸ್ಥೆ ಹಾಗು ಇತರ ಕಡೆಗಳಲ್ಲಿ ಶನಿವಾರ ಸ್ವತಂತ್ರ್ಯೋತ್ಸವನ್ನು ಆಚರಿಸಲಾಯಿತು.

ಪೋರ್ಟ್ ವಾರ್ಡ್

45ನೇ ಪೋಟ್ ವಾರ್ಡ್‌ನಲ್ಲಿ ಪೋರ್ಟ್ ವಾರ್ಡ್ ಫ್ರೆಂಡ್ಸ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹಿರಿಯರಾದ ಕೆಪಿ ಮೊಹಿದಿನ್ ಧ್ವಜಾರೋಹಣ ಗೈದರು. ಈ ಸಂದರ್ಭ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ಪೋರ್ಟ್ ವಾರ್ಡಿನ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಪೊರೇಟರ್ ಅಬ್ದುಲ್ ಲತೀಫ್ ಮತ್ತಿತರರು ಪಾಲ್ಗೊಂಡಿದ್ದರು.

ಬಜ್ಪೆ ಪ್ರೀಸ್
ಬಜ್ಪೆಪ್ರೀಸ್ಸ್ ಫ್ಯಾಮಿಲಿ ವತಿಯಿಂದ ಪ್ರೀಸ್ಸ್ ರೆಸಿಡೆನ್ಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಜಿ ಮುಹಮ್ಮದ್ ಶರೀಫ್ ಧ್ವಜಾರೋಹಣಗೈದರು. ಅತಿಥಿಗಳಾಗಿ ಬದ್ರುದ್ದೀನ್, ಇಸ್ಮಾಯಿಲ್ ಕೂಳೂರು, ಬಶೀರ್, ಫೈಝಲ್, ಹಫೀಝ್, ಹಮೀದ್ ಉಪಸ್ಥಿತರಿದ್ದರು.

ಹೆಲ್ಪ್‌ಲೈನ್ ಅಮ್ಮೆಂಬಳ

ಹೆಲ್ಪ್ಲೈನ್ ಅಮ್ಮೆಂಬಳ ಇದರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಉಬೈದ್ ಧ್ವಜಾರೋಹಣಗೈದರು. ನಸ್ವೀರ್ ಮುಸ್ಲಿಯಾರ್ ದುಆ ಗೈದರು. ಈ ಸಂದರ್ಭ ಸಾಧಕರನ್ನು ಸನ್ಮಾನಿಸಲಾಯಿತು. ಇಕ್ಬಾಲ್ ಕೋಟೆ, ಕೆರೀಂ, ಹನೀಫ್ ಎಸ್. ಸಿದ್ದೀಕ್, ಪುತ್ತ, ಸಿರಾಜುದ್ದೀನ್ ಅಮ್ಮೆಂಬಳ, ಆರ್‌ಕೆ ಮದನಿ ಅಮ್ಮೆಂಬಳ, ಶಬೀರ್ ಕೋಟೆ, ಅಬ್ಬಾಸ್ ಕೋಟೆ, ಆರಿಫ್ ಕೋಟೆ, ನಿಝಾಂ ಕೋಟೆ, ಮನ್ಸೂರ್ ಪೇಟೆ, ಅಶ್ರಫ್ ಪೇಟೆ, ಲತೀಫ್ ಪೇಟೆ ದಾನಿಗಳಾದ ನಿಸಾರ್ ಕೋಟೆ, ಫಾರೂಕು ಕೋಟೆ, ಸಿರಾಜ್ ಕೋಟೆ, ಹಿರಿಯರಾದ ಅಬ್ದುಲ್ ಖಾದರ್ ಪಾಲ್ಗೊಂಡಿದ್ದರು.

 ಪಿಎಫ್‌ಐ ಮಲಾರ್ 

ಪಿಎಫ್‌ಐ ಮಲಾರ್ ಡಿವಿಜನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಡಿವಿಜನ್ ಅಧ್ಯಕ್ಷ ಝಾಹಿದ್ ಮಲಾರ್ ಧ್ವಜಾರೋಹಣಗೈದರು. ಪಿಎಫ್‌ಐ ಡಿವಿಜನ್ ಕಾರ್ಯದರ್ಶಿ ಝೈನುದ್ದಿನ್ ಹರೇಕಳ ಸಂದೇಶ ಭಾಷಣಗೈದರು. ಮಲಾರ್ ಹೆಲ್ಪ್ಲೈನ್‌ನ ಮುಖಂಡರಾದ ಅಶ್ಫಕ್ ಮತ್ತು ಸಿಎಫ್‌ಐ ಮಲಾರ್ ಏರಿಯಾ ಸಮಿತಿಯ ಕಾರ್ಯದರ್ಶಿ ಆಶಿಕ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಿಎಫ್‌ಐ ಮಲಾರ್ ಏರಿಯಾ ಅಧ್ಯಕ್ಷ ಉಬೈದ್ ಅಮ್ಮೆಂಬಳ, ಕಾರ್ಯದರ್ಶಿ ನಾಸಿರ್ ಮಲಾರ್, ಎಂಇಎಸ್ ಮಲಾರ್ ಅಧ್ಯಕ್ಷ ಎಸ್‌ಎಂ ಇಸ್ಮಾಯಿಲ್ ಕೋಡಿ, ಎಂಇಎಸ್ ಮಲಾರ್ ಗಲ್ಫ್ ಘಟಕದ ಅಧ್ಯಕ್ಷ ಅಶ್ರಫ್ ಮದೀನ, ಎಸ್‌ಡಿಪಿಐ ಪಾವೂರು ಗ್ರಾಮ ಸಮಿತಿಯ ಅಧ್ಯಕ್ಷ ಎಂಕೆ ಕಮರುದ್ದೀನ್, ಆಸರೆ ಫೌಂಡೇಶನ್‌ನ ಅಧ್ಯಕ್ಷ ಬಶೀರ್ ಅಕ್ಷರನಗರ, ಬದ್ರಿಯ ಜುಮಾ ಮಸೀದಿಯ ಉಪಾಧ್ಯಕ್ಷ ಮುನೀರ್ ಬದ್ರಿಯಾ ನಗರ ಉಪಸ್ಥಿತರಿದ್ದರು.

ಎಸೆಸ್ಸೆಫ್ ತಲಪಾಡಿ

ಎಸೆಸ್ಸೆಫ್ ತಲಪಾಡಿ ಸೆಕ್ಟರ್ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಯೆನಪೋಯ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ಎಮ್ಮೆಸ್ಸೆಮ್ ಅಬ್ದುರ್ರಶೀದ್ ಝೈನಿ ಖಾಮಿಲಿ ತಲಪಾಡಿ ಧ್ವಜಾರೋಹಣಗೈದರು. ಮುಸ್ತಫ ಝುಹ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮುನೀರ್ ಸಖಾಫಿ ಕೆಸಿ ರೋಡ್, ಕೋಟೆಕಾರ್ ಪಟ್ಟಣ ಪಂಚಾಯತ್‌ನ ಕೌನ್ಸಿಲರ್ ಮೊಯಿದಿನ್ ಬಾವಾ, ಖಾದರ್ ಮಕ್ಯಾರ್, ವಕ್ಫೃ್ ಸಲಹಾ ಸಮಿತಿಯ ಸದಸ್ಯ ಉಸ್ಮಾನ್ ಪಲ್ಲ, ಡಿವಿಜನ್ ಕೋಶಾಧಿಕಾರಿ ಸಿರಾಜುದ್ದೀನ್, ಉಪಾಧ್ಯಕ್ಷ ಇಸ್ಮಾಯಿಲ್ ಕೆಸಿ ನಗರ, ಅನ್ವೀಝ್ ಕೆಸಿ ರೋಡ್, ಮುಸ್ತಫ ಕೆಸಿ ನಗರ, ಇಬ್ರಾಹೀಂ, ಕೆಎಚ್ ಹಮೀದ್ ತಲಪಾಡಿ, ಯಾಕೂಬ್ ತಲಪಾಡಿ, ಪಿಲಿಕೂರ್ ಬಾವಾ ಹಾಜಿ ಉಪಸ್ಥಿತರಿದ್ದರು.

ಜಲಾಲ್‌ಬಾಗ್

ದೇರಳಕಟ್ಟೆಯ ಜಲಾಲ್‌ಬಾಗ್ ಮಸ್ಜಿದುಲ್ ಅರಫಾ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹೈದರ್ ಪರ್ತಿಪ್ಪಾಡಿ ಧ್ವಜಾರೋಹಣಗೈದರು. ಮಸೀದಿಯ ಅಧ್ಯಕ್ಷ ಅಬ್ದುರ್ರಝಾಕ್ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಇಸಾಕ್ ಫೈಝಿ ದುಆಗೈದರು. ಅತಿಥಿಗಳಾಗಿ ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯ ಡಿ.ಎಂ. ಮುಹಮ್ಮದ್ (ಪುಷ್ಟಿ), ಮದ್ರಸ ಶಿಕ್ಷಕ ಜಾಫರ್ ಮೌಲವಿ, ಮಸೀದಿಯ ಆಡಳಿತ ಸಮಿತಿ ಸದಸ್ಯರಾದ ಪಿ.ಕೆ. ಅಬೂಬಕ್ಕರ್, ಹಮೀದ್ ಡ್ರೈವರ್, ಮುಹಮ್ಮದ್ ಫಾರೂಕ್, ಅನ್ವರ್ ಪಿಲಾರ್, ಅಬ್ದುಲ್ ರಹ್ಮಾನ್ ಹಾಜಿ, ಇಸ್ಮಾಯಿಲ್ ಯುಪಿ, ಖಾದರ್ ಬೈತಾರ್ ಮತ್ತಿತರರು ಭಾಗವಹಿಸಿದ್ದರು.

ಮಸೀದಿಯ ಸಮಿತಿ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಕೊಣಾಜೆ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಹಮೀದ್ ಪಜೀರ್ ವಂದಿಸಿದರು.

ಕಾವೂರು ಪಿಎಫ್‌ಐ

ಸ್ವಾತಂತ್ರೋತ್ಸವದ ಪ್ರಯುಕ್ತ ಪಿಎಫ್‌ಐ ಬ್ಲಡ್ ಡೋನರ್ಸ್ ಫೋರಮ್ ಮತ್ತು ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಕಾವೂರಿನಲ್ಲಿ ರಕ್ತದಾನ ಶಿಬಿರ ನಡೆಯಿತು. ಪಿಎಫ್‌ಐ ಕಾವೂರು ವಲಯಾಧ್ಯಕ್ಷ ನೌಶಾದ್ ಕಾವೂರು ಅಧ್ಯಕ್ಷತೆ ವಹಿಸಿದ್ದರು. ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಕೊರ್ಡಿನೇಟರ್ ಪ್ರವೀಣ್ ಕುಮಾರ್ ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಿಎಫ್‌ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಾವೂರು, ಕೂಳೂರು ಜುಮಾ ಮಸೀದಿಯ ಗೌರವಾಧ್ಯಕ್ಷ ಮುಹಮ್ಮದ್ ಅಲಿ, ಕೂಳೂರು ಮಸೀದಿ ಅಧ್ಯಕ್ಷ ಹಾಜಿ ಅಬೂಬಕರ್ ಸಿದ್ದೀಕ್, ಶಾಂತಿನಗರ ಮಸೀದಿ ಅಧ್ಯಕ್ಷ ಇಬ್ರಾಹಿಂ ಸಫಾನಗರ, ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯ ಹನೀಫ್ ಕಾವೂರು ಅತಿಥಿಯಾಗಿ ಭಾಗವಹಿಸಿದ್ದರು. ಪಿಎಫ್‌ಐ ಕಾವೂರು ಡಿವಿಜನ್ ಕಾರ್ಯದರ್ಶಿ ನಿಸಾರ್ ಕಾವೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಹಳೆಕೋಟೆ

ಉಳ್ಳಾಲದ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸೈಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಯದ್ ಮದನಿ ಪ್ರೌಢ ಶಾಲೆಯಲ್ಲಿ ಉಳ್ಳಾಲ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಜುಮಾ ಮಸ್ಜಿದ್ ಅಧ್ಯಕ್ಷ ಅಲ್ಹಾಜ್ ಅಬ್ದುಲ್ ರಶೀದ್ ಧ್ವಜಾರೋಹಣಗೈದರು.

ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಕಾರ್ಯ ದರ್ಶಿ ಎ.ಕೆ ಮೊಯ್ದಿನ್, ಉಪಾಧ್ಯಕ್ಷ ಇಬ್ರಾಹಿಂ ಕಕ್ಕೆತೋಟ, ಶಾಲಾ ಸಂಚಾಲಕ ಇಸ್ಮಾಯಿಲ್ ಹಾಜಬ್ಬ, ಸದಸ್ಯರಾದ ಎಂ ಎಚ್ ಇಬ್ರಾಹಿಂ, ಅಲ್ತಾಫ್ ಯುಎಚ್, ಮುಹಮ್ಮದ್ ಮೇಸ್ತ್ರಿ, ಹಾಜಿ ಝೈನುದ್ದೀನ್, ಮುಹಮ್ಮದ್ ಹಳೆಕೋಟೆ, ಹಮೀದಾಕ, ಫೈಝಲ್ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಕೆ.ಎಂ.ಕೆ ಮಂಜನಾಡಿ ಸ್ವಾಗತಿಸಿ, ವಂದಿಸಿದರು.

ಇನೋಳಿ ಎಸ್‌ಡಿಪಿಐ

ಎಸ್‌ಡಿಪಿಐ ಪಾವೂರು ಗ್ರಾಮ ಸಮಿತಿ ಮತ್ತು ಇನೋಳಿ ಬ್ರಾಂಚ್ ಸಮಿತಿಯ ವತಿಯಿಂದ ಇನೋಳಿ ‘ಎ’ ಸೈಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಾಂಚ್ ಅಧ್ಯಕ್ಷ ಇಕ್ಬಾಲ್ ಐಕೆ ಧ್ವಜಾರೋಹಣಗೈದರು. ಜಾಮಿಯ ಮುಬಾರಕ್ ಮಸೀದಿಯ ಗೌರವಾಧ್ಯಕ್ಷ ಐ.ಹುಸೈನ್ ಕಡವು, ಸ್ಥಳೀಯ ಮುಖಂಡರಾದ ಹುಸೈನ್ ಬಾವು, ಪಿಎಫ್‌ಐ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಇಮ್ತಿಯಾಝ್ ಗ್ರಾಮಚಾವಡಿ, ಎಸ್‌ಡಿಪಿಐ ಪಾವೂರು ಗ್ರಾಮ ಸಮಿತಿಯ ಅಧ್ಯಕ್ಷ ಖಮರುದ್ದೀನ್ ಎಂಕೆ, ಪಿಎಫ್‌ಐ ಮಲಾರ್ ಡಿವಿಜನ್ ಕಾರ್ಯದರ್ಶಿ ನಾಸಿರ್ ಮಲಾರ್, ಜಾಮಿಯ ಮುಬಾರಕ್ ಮಸೀದಿಯ ಅಧ್ಯಕ್ಷ ಐ ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿ ಟಿಎಚ್ ಅಬ್ಬಾಸ್, ಎಸ್‌ವೈಎಸ್ ಇನೋಳಿ ಇದರ ಅಧ್ಯಕ್ಷ ಶಬೀರ್ ಕಲ್ಲಾಜೆ, ಸಮದ್ ಮುಕ್ರಿ, ಅನ್ಸಾರ್ ಇನೋಳಿ ಮತ್ತಿತರರು ಉಪಸ್ಥಿತರಿದ್ದರು.

ಕೂಳೂರು ಮಸ್ಜಿದ್

ಕೂಳೂರು ಸಮೀಪದ ಪಂಜಿಮೊಗರು ಮುಹಿಯ್ಯುದ್ದೀನ್ ಜುಮಾ ಮಸ್ಜಿದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಸೀದಿಯ ಅಧ್ಯಕ್ಷ ಸಿದ್ದೀಕ್ ಹಾಜಿ ಧ್ವಜಾರೋಹಣಗೈದರು. ಖತೀಬ್ ಇಕ್ರಮುಲ್ಲಾ ಸಖಾಫಿ ಹಾಗೂ ಗೌರವಾಧ್ಯಕ್ಷ ಮುಹಮ್ಮದ್ ಅಲಿ ಸಂದೇಶ ನೀಡಿದರು. ಕಾರ್ಯದರ್ಶಿ ಶೇಕಬ್ಬ ಸ್ವಾಗತಿಸಿ,ವಂದಿಸಿದರು.

ಕೆಸಿಎಫ್ 

ಸ್ವಾತಂತ್ರೋತ್ಸವದ ಅಂಗವಾಗಿ ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ವತಿಯಿಂದ ಸೌದಿ ಅರೇಬಿಯಾದಲ್ಲಿ ರಕ್ತದಾನ ಶಿಬಿರ ನಡೆಯಿತು.ಸೆಕ್ಟರ್ ಅಧ್ಯಕ್ಷ ಹಬೀಬ್ ಮುಸ್ಲಿಯಾರ್ ಮರ್ಧಾಳ, ಕೆಸಿಎಫ್ ಸೌದಿ ರಾಷ್ಟ್ರೀಯ ನಾಯಕ ಅಸ್ರು ಬಜ್ಪೆ, ಅಲ್ಹಸ್ಸ ಆಸ್ಪತ್ರೆಯ ಡಾ. ಅಶ್ರಫ್ ಬೆಂಗಳೂರು, ಕೆಸಿಎಫ್ ಅಲ್ಹಸ್ಸ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಾರೀಸ್ ಕಾಜೂರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News