ತರಕಾರಿ, ಹಣ್ಣುಹಂಪಲು ಸಗಟು ಮಾರಾಟ ಎಪಿಎಂಸಿಯಲ್ಲೇ ಇರಲಿ: ಕೃಷ್ಣರಾಜ ಹೆಗ್ಡೆ ಒತ್ತಾಯ

Update: 2020-08-16 17:10 GMT

ಪಣಂಬೂರು, ಆ.16: ಬೈಕಂಪಾಡಿಯ ಎಪಿಎಂಸಿಯಲ್ಲಿ 80 ಎಕರೆ ವಿಶಾಲ ಪ್ರದೇಶವಿದ್ದು ಇದು ರೈತರ ,ವ್ಯಾಪಾರಸ್ಥರ ಹಕ್ಕಿನ ಮನೆಯಾಗಿದೆ. ಅವರು ಮತ್ತೆ ಹಂಗಿನ ಮನೆಗೆ ಹೋಗಿ ಸಮಸ್ಯೆ ಎದುರಿಸುವುದಕ್ಕಿಂತ ಎಪಿಎಂಸಿ ಪ್ರಾಂಗಣದಲ್ಲೇ ವ್ಯಾಪಾರ ನಡೆಸಲು ಸೂಚಿಸಬೇಕು ಎಂದು ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

ಈಗಾಗಲೇ ವ್ಯಾಪಾರಸ್ಥರ ಅನುಕೂಲಕ್ಕಾಗಿ 2 ಕೋ.ರೂ.ವನ್ನು ಎಪಿಎಂಸಿ ಅಭಿವೃದ್ಧಿಗೆ ತೊಡಗಿಸಿದೆ. ಮುಂದಿನ ದಿನಗಳಲ್ಲಿ ಕೋಟ್ಯಂತರ ರೂ.ಯೋಜನೆ ರೂಪಿಸಿದ್ದು, ವ್ಯಾಪಾರಿಗಳ ಗೊಂದಲದ ಸ್ಥಳಾಂತರದಿಂದ ಅಪಾರ ನಷ್ಠಕ್ಕೆ ಕಾರಣವಾಗಬಹುದು ಎಂದಿದ್ದಾರೆ.

 ಸೆಂಟ್ರಲ್ ಮಾರುಕಟ್ಟೆಯನ್ನು ವ್ಯಾಪಾರಕ್ಕೆ ತೆರೆದ ಕಾರಣ ಮತ್ತೆ ಕೊರೋನ ವೈರಸ್ ಹರಡುವಿಕೆ ಹೆಚ್ಚಾಗುವ ಆತಂಕ ಇದೆ. ಹೀಗಾಗಿ ವ್ಯಾಪಾರಿಗಳು ಜನರ, ವ್ಯಾಪಾರದ ಹಿತದೃಷ್ಟಿಯಿಂದ ‘ನಿಮ್ಮ ಹಕ್ಕಿನ ಮನೆ ಎಪಿಎಂಸಿಯಲ್ಲೇ ಇರಬೇಕು.ಇಲ್ಲಿ ಭದ್ರತೆ ಸಹಿತ ಎಲ್ಲಾ ಸೌಲಭ್ಯವನ್ನು ಒದಗಿಸಲಾಗಿದೆ’ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News