×
Ad

ಕೊಣಾಜೆ: ಮಂಗಳ ಗ್ರಾಮೀಣ ಯುವಕ ಸಂಘದ ವತಿಯಿಂದ ಸ್ವಾತಂತ್ರೋತ್ಸವ

Update: 2020-08-16 22:54 IST

ಕೊಣಾಜೆ, ಆ.15: ಮಂಗಳ ಗ್ರಾಮೀಣ ಯುವಕ ಸಂಘ ಇದರ ವತಿಯಿಂದ 74ನೆ ಸ್ವಾತಂತ್ರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.

ಧ್ವಜಾರೋಹಣ ಕಾರ್ಯಕ್ರಮವನ್ನು ಮುಡಾ ಮಾಜಿ ಅಧ್ಯಕ್ಷರಾದ  ಹಾಜಿ ಇಬ್ರಾಹೀಂ ಕೋಡಿಜಾಲ್ ನೆರವೇರಿಸಿ ಸ್ವಾತಂತ್ರ ದಿನಾಚರಣೆಯ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಕೊಣಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಅಚ್ಯುತ ಗಟ್ಟಿ, ಮಾಜಿ ಸದಸ್ಯ ಹಾಜಿ ಹಸನ್ ಕುಂಞಿ, ಮಂಗಳ ಗ್ರಾಮೀಣ ಯುವಕ ಸಂಘದ ಮಾಜಿ ಅಧ್ಯಕ್ಷರಾದ ಅಬ್ದುನ್ನಾಸಿರ್ ಕೆ.ಕೆ. ಹಾಗೂ ರಹ್ಮಾನ್ ಕೆ.ಎಸ್, ಉಪಾಧ್ಯಕ್ಷ ದಯಾನಂದ ಗಟ್ಟಿ, ಸಲಹೆಗಾರರಾದ ಹಾಜಿ ಮುಹಮ್ಮದ್ ಕೆ.ಐ , ಖಾದರ್ ಜಿ.ಪಿ ಮತ್ತಿತರರು ಉಪಸ್ಥಿತರಿದ್ದರು.

ಮಂಗಳ ಗ್ರಾಮೀಣ ಯುವಕ ಸಂಘ ಅಧ್ಯಕ್ಷ ಅಬ್ದುಲ್ ರಹ್ಮಾನ್ ಎ.ಕೆ ಸ್ವಾಗತಿಸಿದರು, ಕೋಶಾಧಿಕಾರಿ ಹಬೀಬ್ ರಹ್ಮಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News