ಗುರುಪುರ : ರಾಯಲ್ ಗೈ‌ಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2020-08-16 17:27 GMT

ಗುರುಪುರ ಅಲ್ ಹೈದ್ರೊಸಿಯ ಜುಮಾ ಮಸೀದಿಯಾ ವಠಾರದಲ್ಲಿ  ರಾಯಲ್ ಗಯ್ಸ್ ವತಿಯಿಂದ  74 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ  ಧ್ವಜಾರೋಹಣ  ನೆರವೇರಿತು.

ಧ್ವಜಾರೋಹಣವನ್ನು ಸ್ಥಳೀಯ ನಿವಾಸಿ ಅಬ್ದುಲ್ ಖಾದರ್  ಮತ್ತು ಕಬೀರ್ ನೆರವೇರಿಸಿ ದುವಾಃ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೌಫಲ್ ವಹಿಸಿದರು. ನಿರೂಪಣೆಯನ್ನು ನಹೀಂ ಜಿ.ಮ್. ನೆರವೇರಸಿದರು. ಸ್ವಾಗತ ಭಾಷಣವನ್ನು ನಿಸ್ಸಾರ್ ಹಾಗೂ ವಂದನಾರ್ಪಣೆಯನ್ನು  ನವಾಝ್ ನೆರವೇರಿಸಿದರು.

ಮುಖ್ಯ ಅತಿಥಿ ಭಾಷಣದ ಮೂಲಕ ಫಾರೂಕ್ ಅವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿ ಮುಂದಿನ ಯುವಜನಾಂಗ ದೇಶಕ್ಕೆ ಯಾವ ಒಳ್ಳೆಯ ರೀತಿಯ ಕೆಲಸ ಕಾರ್ಯವನ್ನು ಮಾಡಬೇಕೆಂದು ತಮ್ಮ ಭಾಷಣದ ಮೂಲಕ ವಿವರಿಸಿ ಕೊಟ್ಟರು. ಈ ಕಾರ್ಯಕ್ರಮಕ್ಕೆ ಸಿಹಿ ತಿಂಡಿಗಳನ್ನು ಆಶ್ರಫ್ ಅವರು ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News