×
Ad

ಪುತ್ತೂರು: ​ಬಿಸಿಯೂಟ ಕಾರ್ಮಿಕರಿಗೆ ಗೌರವ ಧನ ಪಾವತಿಗೆ ಆಗ್ರಹಿಸಿ ಎಸ್‍ಡಿಪಿಐ ಮನವಿ

Update: 2020-08-17 22:49 IST

ಪುತ್ತೂರು: ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಕ್ಷರ ದಾಸೋಹದ ಬಿಸಿಯೂಟದ ಅಡುಗೆಯವರು ಮತ್ತು ಸಹಾಯಕಿಯರಿಗೆ ಕಳೆದ 5 ತಿಂಗಳಿನಿಂದ ಬಾಕಿಯಾಗಿರುವ ಗೌರವಧನವನ್ನು ಪಾವತಿಸುವಂತೆ ಎಸ್‍ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಪುತ್ತೂರು ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ರಾಜ್ಯದ 54 ಸಾವಿರ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಒಟ್ಟು 1.70 ಲಕ್ಷ ಅಡುಗೆಯವರು ಮತ್ತು ಅಡುಗೆ ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ 5 ತಿಂಗಳಿನಿಂದ ಸರ್ಕಾರ ಅವರಿಗೆ ಗೌರವ ಧನ ನೀಡಿಲ್ಲ. ಲಾಕ್‍ಡೌನ್‍ನಿಂದಾಗಿ ಇತರೆ ಕೆಲಸ ಸಿಗದೆ ಅವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶಾಲೆಗಳಲ್ಲಿ ಡಿಗ್ರೂಪ್ ನೌಕರರು ಇಲ್ಲದ ಶಾಲೆಗಳಲ್ಲಿ ಅಡುಗೆಯವರೇ ಸ್ವಚ್ಚತೆ ಮತ್ತಿತರ ಶಾಲಾ ಕೆಲಸಗಳನ್ನೂ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಅವರ ಸೇವೆಗೆ ಪ್ರತಿಫಲ ನೀಡಬೇಕಾಗಿದ್ದು, ತಕ್ಷಣವೇ ಅವರ 5 ತಿಂಗಳ ವೇತನವನ್ನು ಬಿಡುಗಡೆಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. 

ಪುತ್ತೂರು ತಹಸೀಲ್ದಾರ್ ರಮೇಶ್ ಬಾಬು ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಎಸ್‍ಡಿಪಿಐ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸಿದ್ದೀಕ್ ಕೆ.ಎ, ಕಾರ್ಯದರ್ಶಿ ಅಶ್ರಫ್ ಬಾವು, ಜೊತೆ ಕಾರ್ಯದರ್ಶಿ ಯಹ್ಯಾ, ಉಪಾಧ್ಯಕ್ಷ ಇಬ್ರಾಹಿಂ ಹಾಜಿ ಸಾಗರ್, ಸದಸ್ಯ ಪಿಬಿಕೆ ಮಹಮ್ಮದ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News