×
Ad

ಭೂಸುಧಾರಣಾ, ಎಪಿಎಂಸಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ಜೆಡಿಎಸ್ ಧರಣಿ

Update: 2020-08-18 20:51 IST

ಉಡುಪಿ, ಆ.18: ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿದ ರಾಜ್ಯ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಜೆಡಿಎಸ್ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗಳ ಕಚೆೀರಿ ಎದುರು ಧರಣಿ ನಡೆಸಲಾಯಿತು.

ಜೆಡಿಎಸ್ ಜಿಲ್ಲಾಧ್ಯಕ್ಷ ಯೊಗೀಶ್ ವಿ.ಶೆಟ್ಟಿ ಮಾತನಾಡಿ, ಈ ಕಾಯ್ದೆಗಳು ರೈತರಿಗೆ ಮಾರಕವಾಗಿದ್ದು, ಇದರಿಂದ ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಅನ್ಯಾಯವಾಗುತ್ತದೆ. ಕಾರ್ಮಿಕ ಕಾಯ್ದೆ ಕೂಡ ಬಹಳಷ್ಟು ಅಪಾಯಕಾರಿ ಯಾಗಿದೆ. ಸರಕಾರ ಜಾರಿಗೆ ತಂದಿರುವ ಮೂರು ಕಾಯ್ದೆ ಗಳಿಗೆ ಸಮ್ಮತಿ ಇಲ್ಲ. ಈ ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಅನುಷ್ಠಾನಕ್ಕೆ ತಂದಿದ್ದಾರೆ. ಇದನ್ನು ನಾವು ವಿರೋಧಿಸುತ್ತೆವೆ ಎಂದರು.

ಬಳಿಕ ಈ ಕುರಿತ ಮನವಿಯನ್ನು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರ ಮೂಲಕ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಸಲ್ಲಿಸಲಾ ಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಅಡಿಗ, ಜಯರಾಮ ಆಚಾರ್ಯ, ಜಯಕುಮಾರ್ ಪರ್ಕಳ, ಬಿ.ಟಿ.ಮಂಜುನಾಥ, ರಂಜಿತ್ ಬೈಂದೂರು, ಕಿಶೋರ್ ಕುಂದಾಪುರ, ರಾಜು ದೇವಾಡಿಗ, ಪ್ರಕಾಶ್ ಶೆಟ್ಟಿ ಬೆಳ್ಳಂಪಳ್ಳಿ, ರವಿರಾಜ್ ಸಾಲಿಯಾನ್, ಶ್ರೀಕಾಂತ್ ಹೆಬ್ರಿ, ಎಸ್.ಪಿ. ಬರ್ಬೋಜಾ, ಅಬ್ದುಲ್ ಹಮೀದ್, ಯೂಸೂಫ್, ರಮೇಶ್ ಕುಂದಾಪುರ, ಮಾರುತಿ ಮೊಗೇರ, ಶಂಶುದ್ದೀನ್ ಮಜೂರು, ವಾಲ್ಟರ್ ಬಾರಕೂರು, ರಶೀದ್ ಯು.ಎ., ಪ್ರಶಾಂತ್ ಭಂಡಾರಿ, ಪ್ರಶಾಂತ್ ಸಾಲಿಯಾನ್, ಮುಹಮ್ಮದ್ ಹ್ಯಾರಿಸ್, ಸನವರ, ಸಂಪತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News