×
Ad

ಮಾಸ್ಕ್: 22,600ರೂ. ದಂಡ ವಸೂಲಿ

Update: 2020-08-18 21:05 IST

ಉಡುಪಿ, ಆ.11: ಉಡುಪಿ ಜಿಲ್ಲೆಯಲ್ಲಿ ಸುರಕ್ಷಿತ ಅಂತರ ಕಾಪಾಡದೆ ಹಾಗೂ ಮಾಸ್ಕ್ ಧರಿಸದೆ ಕೋವಿಡ್-19 ನಿಯಮ ಉಲ್ಲಂಘನೆ ಮಾಡಿರುವವ ರಿಂದ ಆ.18ರಂದು ಒಟ್ಟು 22,600ರೂ. ದಂಡ ವಸೂಲಿ ಮಾಡಲಾಗಿದೆ.

ಕಾಪು ಪುರಸಭೆ ವ್ಯಾಪ್ತಿಯಲ್ಲಿ 200ರೂ., ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 100ರೂ., ಗ್ರಾಮೀಣ ಪ್ರದೇಶಗಳಾದ ಕಾರ್ಕಳ-6500ರೂ., ಕುಂದಾಪುರ- 3900ರೂ., ಕಾಪು- 5000ರೂ., ಬ್ರಹ್ಮಾವರ-5800ರೂ., ಬೈಂದೂರು- 1100ರೂ. ದಂಡ ವಸೂಲಿ ಮಾಡಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ ನಗರ ಪ್ರದೇಶದಲ್ಲಿ 89200ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 1,22,100ರೂ. ಸೇರಿದಂತೆ ಒಟ್ಟು 2,11,300ರೂ. ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News