×
Ad

ಮಣಿಪಾಲ ಎಂಐಟಿಗೆ ರೋವರ್ ಡಿಸೈನ್ ಚಾಲೆಂಜ್ ಪ್ರಶಸ್ತಿ

Update: 2020-08-18 21:09 IST

ಮಣಿಪಾಲ, ಆ.18: ಮಾಹೆಯ ಆಡಳಿತಕ್ಕೊಳಪಟ್ಟ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಮಾರ್ಸ್‌ ರೋವರ್ ಮಣಿಪಾಲ (ಎಂಆರ್‌ಎಂ) ತಂಡ ವಿನ್ಯಾಸಗೊಳಿಸಿದ ಉಪಕರಣ, ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆದ ಇಂಡಿಯನ್ ರೋವರ್ ಡಿಸೈನ್ ಚಾಲೆಂಜ್ (ಐಆರ್‌ಡಿಸಿ 2020)ರಲ್ಲಿ ಅಗ್ರಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಇಂಡಿಯನ್ ರೋವರ್ ಡಿಸೈನ್ ಚಾಲೆಂಜ್‌ನ ಪ್ರಥಮ ಅಧ್ಯಾಯವನ್ನು ದಕ್ಷಿಣ ಏಷ್ಯ ಮಾರ್ಸ್‌ ಸೊಸೈಟಿ ಈ ವರ್ಷ ಆಯೋಜಿಸಿತ್ತು. ಮಂಗಳ ಗ್ರಹದ ಬಗ್ಗೆ ಅನ್ವೇಷಣೆ ನಡೆಸುವ, ವಿಶ್ವದ ಅತಿದೊಡ್ಡ ಸಂಘಟನೆ ಮಾರ್ಸ್‌ ಸೊಸೈಟಿ ಯಾಗಿದೆ.

ದೇಶದ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗಾಗಿ ಐಆರ್‌ಡಿಸಿ ಈ ಬಾರಿ ಆನ್‌ಲೈನ್ ಸ್ಪರ್ಧೆಯನ್ನು ಆಯೋಜಿಸಿತ್ತು. ಮಂಗಳ ಗ್ರಹಕ್ಕೆ ಕಳುಹಿ ಸುವ ಸುಸಜ್ಜಿತ, ಎಲ್ಲಾ ತಂತ್ರಜ್ಞಾನದೊಂದಿಗೆ ಹಾರಾಟಕ್ಕೆ ಸಿದ್ಧವಾದ ಮಾರ್ಸ್‌ ರೋವರ್‌ನ್ನು ತಯಾರಿಸಿ ಪ್ರದರ್ಶಿಸುವ ಸವಾಲನ್ನು ಹಾಕಲಾ ಗಿತ್ತು. ಮಾರ್ಸ್‌ ರೋವರ್ ಮಣಿಪಾಲ ತಂಡ ವೌಸರ್ ಇಲೆಕ್ಟ್ರಾನಿಕ್ಸ್ ಹಾಗೂ ಎಸ್‌ಐಸಿಕೆ ಸೆನ್ಸರ್ ಇಂಟೆಲಿಜೆನ್ಸ್ ಆಧಾರಿತ ತಯಾರಿಸಿದ ರೋವರ್ ಈ ಬಾರಿ ಅಗ್ರಸ್ಥಾನ ಪಡೆಯಿತು.

ಜೂನ್-ಜುಲೈ ತಿಂಗಳಲ್ಲಿ ಈ ಸ್ಪರ್ಧೆ ನಡೆದಿದ್ದು, ಭಾರತ, ಅಮೆರಿಕ, ಪೊಲಂಡ್, ಇಟಲಿ, ಸಿಂಗಾಪುರ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಸೇರಿ ಏಳು ದೇಶಗಳ 28 ತಂಡಗಳು ಇದರಲ್ಲಿ ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಎಂಐಟಿಯ ಎರಡು ಮತ್ತು ಮೂರನೇ ವರ್ಷದ ಒಟ್ಟು 30 ಇಂಜಿನಿಯ ರಿಂಗ್ ವಿದ್ಯಾರ್ಥಿಗಳು ಮಣಿಪಾಲ ಮಾರ್ಸ್‌ ರೋವರ್ ತಂಡವನ್ನು ಪ್ರತಿನಿಧಿಸಿದ್ದರು.

ಸ್ಪರ್ಧೆಯ ಫಲಿತಾಂಶವನ್ನು ಆ.15ರಂದು ಅಮೆರಿಕ ಮಾರ್ಸ್‌ ಸೊಸೈಟಿಯ ಅಧ್ಯಕ್ಷ ಹಾಗೂ ಸ್ಥಾಪಕ ಡಾ.ರಾಬರ್ಟ್ ಜುಬ್ರಿನ್ ಪ್ರಕಟಿಸಿದ್ದು ಒಟ್ಟು 816.5 ಅಂಕಗಳನ್ನು ಗಳಿಸಿದ ಎಂಐಟಿ ತಂಡ ಅಗ್ರಸ್ಥಾನ ಪಡೆದಿತ್ತು. ಎರಡನೇ ಸ್ಥಾನವನ್ನು 801 ಅಂಕ ಗಳಿಸಿದ ನೇತಾಜಿ ಸುಭಾಷ್ ವಿವಿ ಆಫ್ ಟೆಕ್ನಾಲಜಿ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News