ಪಿಯು ಉಪನ್ಯಾಸಕರ ನೇಮಕಾತಿ: ಕರಾವಳಿ ಕರ್ನಾಟಕದಿಂದ ಒಬ್ಬರೇ ಆಯ್ಕೆ
Update: 2020-08-18 21:10 IST
ಉಡುಪಿ, ಆ.18: ಆರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸರಕಾರಿ ಪಿಯು ಉಪನ್ಯಾಸಕರ ನೇಮಕಾತಿಗೆ ಇದೀಗ ಕಾಯಕಲ್ಪ ಬಂದಿದ್ದು, ಕೊಡಗು ಸಹಿತ ಕರಾವಳಿ ಕರ್ನಾಟಕದಿಂದ ಒಬ್ಬರು ಮಾತ್ರ ಆಯ್ಕೆಯಾಗಿದ್ದಾರೆ.
ಈ ಸಂಬಂಧ ಕೌನ್ಸೆಲಿಂಗ್ ಆಯಾ ಜಿಲ್ಲೆಗಳ ಡಿಡಿಪಿಯು ಕಚೇರಿಯ ಕೇಸ್ವಾನ್ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಮಣಿಪಾಲದ ರಜತಾದ್ರಿಯಲ್ಲಿರುವ ಡಿಡಿಪಿಯು ಕಚೇರಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಹಮ್ಮಿ ಕೊಳ್ಳಲಾಗಿದೆ.
ಇಲ್ಲಿ ಕೊಡಗು ಸಹಿತ ಕರಾವಳಿ ಕರ್ನಾಟಕದಿಂದ ಇಂಗ್ಲಿಷ್ ಉಪನ್ಯಾಸಕ ರಾಗಿ ಕೊಳಲಗಿರಿಯ ರಾಜೇಶ್ ಆನಂದ್ ಮಾತ್ರ ಆಯ್ಕೆಯಾಗಿದ್ದಾರೆ. ಇವರು ಈ ಹಿಂದೆ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪ ನ್ಯಾಸಕರಾಗಿದ್ದರು. ಸದ್ಯ ಇವರು ಇಂಗ್ಲಿಷ್ ಸಾಹಿತ್ಯದಲ್ಲಿ ಪಿಎಚ್.ಡಿ ಮಾಡು ತ್ತಿದ್ದಾರೆ.