×
Ad

ಸ್ಕೂಲ್ ಆಫ್ ಕುರ್ ಆನ್ ಸ್ಟಡೀಸ್ ನಲ್ಲಿ ಗಿಡ ನೆಡುವ ಕಾರ್ಯಕ್ರಮ

Update: 2020-08-18 22:51 IST

ಉಳ್ಳಾಲ : ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸಷನ್ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಆಯೋಜಿಸಿದ ಹಸಿರು ಕರಾವಳಿ ಪರಿಸರ ಜಾಗೃತಿ ಅಭಿಯಾನದ ಭಾಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಇತ್ತೀಚಿಗೆ ಕೆ ಸಿ ರೋಡಿನಲ್ಲಿರುವ  ಸ್ಕೂಲ್ ಆಫ್ ಕುರ್ ಆನಿಕ್  ಸ್ಟಡೀಸ್  ವಿದ್ಯಾ ಸಂಸ್ಥೆಯಲ್ಲಿ  ನಡೆಸಲಾಯಿತು.

ಮುಖ್ಯ ಅಥಿತಿಗಳಾಗಿ  ಎಸ್ ಐ ಒ  ರಾಷ್ಟ್ರಾಧ್ಯಕ್ಷರಾದ ಲಾಬೀದ್ ಶಾಫಿ ಗಿಡ ನೆಡುವ ಮೂಲಕ ಅಧಿಕೃತ  ಚಾಲನೆ  ನೀಡಿ, ಹಸಿರಿನ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.

ಎಸ್ ಕ್ಯು ಎಸ್  ಇದರ ಮಾನೇಜಿಂಗ್ ಡೈರೆಕ್ಟರ್ ಉಮರ್ ಆಶಿಕ್ ಅಭಿಯಾನಕ್ಕೆ ಶುಭ ಹಾರೈಸಿದರು. ಎಸ್ ಐ ಒ ಉಳ್ಳಾಲ ಘಟಕಾಧ್ಯಕ್ಷರಾದ ನಿಝಾಮ್ ಉಮರ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್ ಕ್ಯು ಎಸ್   ಅಧ್ಯಾಪಕ ಉಮರ್ ಫಾರೂಕ್ ಅನಿಸಿಕೆಗಳನ್ನೂ ವ್ಯಕ್ತಪಡಿಸಿದರು. ಎಸ್ ಐ ಓ ಜಿಲ್ಲಾಧ್ಯಕ್ಷ ಅಶೀರುದ್ದೀನ್ ಮಂಜನಾಡಿ ಬೀಜಗಳನ್ನು ವಿತರಿಸಿದರು. ವಿದ್ಯಾರ್ಥಿ ಮುಹಮ್ಮದ್ ಕಿರಾಅತ್ ಪಠಿಸಿದರು. ಅಧ್ಯಾಪಕ ಶುಕೂರ್ ಮುದಸ್ಸಿರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News