ಬೈಂದೂರು: 14 ಮಂದಿಯಲ್ಲಿ ಕೊರೋನ ಪಾಸಿಟಿವ್
Update: 2020-08-19 21:39 IST
ಬೈಂದೂರು, ಆ.19: ತಾಲೂಕಿನಲ್ಲಿ ಬುಧವಾರ ಒಟ್ಟು 14 ಮಂದಿಯಲ್ಲಿ ಕೊರೋನ ಸೋಂಕಿಗೆ ಪಾಸಿಟಿವ್ ಕಂಡುಬಂದಿದೆ. ಇದರಿಂದ ತಾಲೂಕಿನ ಏಳು ಗ್ರಾಮಗಳಲ್ಲಿ ಒಟ್ಟು 10 ಕಂಟೈನ್‌ಮೆಂಟ್ ವಲಯಗಳನ್ನು ಮಾಡಲಾಗಿದೆ ಎಂದು ತಹಶೀಲ್ದಾರ್ ಬಸಪ್ಪ ಪೂಜಾರ್ ತಿಳಿಸಿದ್ದಾರೆ.
ಶಿರೂರಿನಲ್ಲಿ ಮೂರು ವಲಯಗಳಿದ್ದು ಐದು ಮಂದಿ ಪಾಸಿಟಿವ್ ಬಂದಿದ್ದರೆ, ನಾಡದಲ್ಲಿ 1-1, ಹಡವು 1-2, ತೆಗ್ಗರ್ಸೆ 2-2, ಬೈಂದೂರು 1-2, ನಾವುಂದ 1-1 ಹಾಗೂ ಬಡಾಕೆರೆಯಲ್ಲಿ 1-1 ಸೇರಿ ಒಟ್ಟು 14 ಮಂದಿಯಲ್ಲಿ ಪಾಸಿಟಿವ್ ಬಂದಿದೆ. ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದರು.