ಮೀನು ಬಲೆಯಲ್ಲಿ ಸಿಲುಕಿಕೊಂಡ ಮೊಸಳೆ
Update: 2020-08-19 22:51 IST
ಭಟ್ಕಳ: ಮೀನು ಹಿಡಿಯಲು ಹಾಕಿದ ಬಲೆಯೊಳಗೆ ಬೃಹತ್ ಗಾತ್ರದ ಮೊಸಳೆಯೊಂದು ಸಿಲುಕಿಕೊಂಡಿರುವ ಘಟನೆ ಇಂದು ತಾಲೂಕಿನ ಅಳ್ವೆಕೋಡಿ ಸಮುದ್ರದಲ್ಲಿ ಜರಗಿದೆ.
ಮೀನು ಹಿಡಿಯಲೆಂದು ಅಳ್ವೆಕೋಡಿಯ ಸಮುದ್ರದ ಭಾಗದಲ್ಲಿ ಕೈ ಬಲೆ ಹಾಕಿ ಬಿಟ್ಟಿದ್ದರು. ಇಂದು ಬಲೆಯನ್ನು ಎಳೆದು ಮೀನುಗಳನ್ನು ತೆಗೆಯಲೆಂದು ಮುಂದಾದ ಮೀನುಗಾರರಿಗೆ ಆಶ್ಚರ್ಯವೊಂದು ಕಾದಿತ್ತು. ಸುಮಾರು 8 ಅಡಿ ಉದ್ದದ ಮೀನೊಂದು ಬಲೆಯಲ್ಲಿ ಸೆರೆಯಾಗಿತ್ತು.
ಸಮುದ್ರದ ಅಬ್ಬರ ಹೆಚ್ಚಿರುವ ಕಾರಣ ವೆಂಕಟಾಪುರ ಹೊಳೆಯ ಹಿನ್ನೀರಿನಿಂದ ಈ ಮೊಸಳೆ ಸಮುದ್ರಕ್ಕೆ ಬಂದಿರಬಹುದು ಎಂದು ಅಂದಾಜಿಸ ಲಾಗಿದ್ದು, ಮೀನುಗಳ ರಾಶಿಯೊಂದಿಗೆ ಸಿಕ್ಕಿದ ಭಾರೀ ಗಾತ್ರದ ಮೊಸಳೆಯನ್ನು ಬಲೆಯಿಂದ ಬಿಡಿಸಿದ ಮೀನುಗಾರರು, ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದು ಅಧಿಕಾರಿಗಳನ್ನು ಅದನ್ನು ಸುರಕ್ಷಿತ ಸ್ಥಾನಕ್ಕೆ ತಲುಪಿಸಿದ್ದಾರೆ ಎನ್ನಲಾಗಿದೆ.