×
Ad

ಕಾಪು: ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

Update: 2020-08-20 17:05 IST

ಕಾಪು : ಜನರ ಪರವಾಗಿ ಆಡಳಿತ ನಡೆಸಬೇಕಿದ್ದ ರಾಜ್ಯ ಸರ್ಕಾರ ಜನವಿರೋಧಿಯಾಗಿದ್ದು, ಎಲ್ಲಾ ಹಂತಗಳಲ್ಲೂ ವಿಫಲವಾಗಿದೆ. ಅಧಿಕಾರದಲ್ಲಿ ಉಳಿಯುವ ಕನಿಷ್ಟ ಅರ್ಹತೆಯನ್ನೂ ಉಳಿಸಿಕೊಂಡಿಲ್ಲ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಕೆಪಿಸಿಸಿ ನಿರ್ದೇಶನದಂತೆ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಗುರುವಾರ ಕಾಪುವಿನಲ್ಲಿ ಜನಧ್ವನಿ ಪ್ರತಿಭಟನಾ ಸಭೆ ಹಾಗೂ ತಹಶೀಲ್ದಾರ್ ಮುಖೇನ ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಅವರು ಮಾತನಾಡಿದರು.

ಕೋವಿಡ್ ನಿಯಂತ್ರಣದಲ್ಲಿ ವಿಫಲವಾಗಿರುವ ಸರ್ಕಾರವೇ ಅದರ ಮೂಲದಿಂದ ದುಡ್ಡು ಮಾಡುವ ಪ್ರಯತ್ನಗಳನ್ನು ನಡೆಸುತ್ತಿರುವುದು ಜನರಿಗೆ ಮಾಡುತ್ತಿರುವ ದ್ರೋಹವಾಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರಗಳು ಇರುವುದರಿಂದ ರಾಜ್ಯವನ್ನು ದೇಶಕ್ಕೇ ಮಾದರಿಯಾಗಿ ರೂಪಿಸಬಹುದಿತ್ತು. ಆದರೆ ಸ್ವತಃ ಮುಖ್ಯಮಂತ್ರಿಗಳಿಂದ ಹಿಡಿದು ಶಾಸಕರು ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರಿಗಳೇ ಕೊರೋನ ಭಾದೆಗೆ ಒಳಗಾಗಿರುವುದರಿಂದ ಮಾದರಿ ಅಭಿವೃದ್ಧಿ ಎನ್ನುವುದು ಇನ್ನು ಕನಸಿನ ಮಾತೇ ಆಗಿದೆ. ಇಂತಹ ಸರಕಾರವನ್ನು ಅ„ಕಾರದಿಂದ ಕೆಳಗಿಸುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು. 

ಜನಧ್ವನಿ ಪ್ರತಿಭಟನಾ ಸಭೆಯ ಮನವಿಯ ಪ್ರತಿಯನ್ನು ಉಪ ತಹಶೀಲ್ದಾರ್ ಅಶೋಕ್ ಕೋಟೇಕಾರ್ ಅವರ ಮೂಲಕವಾಗಿ ರಾಜ್ಯಪಾಲರಿಗೆ ಸಲ್ಲಿಸಲಾಯಿತು. ಕಂದಾಯ ಪರಿವೀಕ್ಷಕ ಕೆ. ರವಿಶಂಕರ್ ಉಪಸ್ಥಿತರಿದ್ದರು. 

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ, ಪ್ರಮುಖರಾದ ಎಂ.ಎ. ಗಫೂರ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಯು.ಸಿ. ಶೇಖಬ್ಬ, ಶಿವಾಜಿ ಸುವರ್ಣ, ಹರೀಶ್ ಶೆಟ್ಟಿ ಪಾಂಗಾಳ, ಸರಸು ಡಿ. ಬಂಗೇರ, ಪ್ರಶಾಂತ್ ಜತ್ತನ್ನ, ಡೇವಿಡ್ ಡಿ. ಸೋಜ, ವಿಕ್ರಂ ಕಾಪು, ಅಖಿಲೇಶ್ ಕೋಟ್ಯಾನ್,  ಪ್ರಭಾ ಬಿ. ಶೆಟ್ಟಿ, ದೀಪಕ್ ಕುಮಾರ್ ಎರ್ಮಾಳ್, ಎಚ್. ಅಬ್ದುಲ್ಲಾ, ದೇವರಾಜ್ ಕೋಟ್ಯಾನ್, ನವೀನ್ ಎನ್. ಶೆಟ್ಟಿ, ಅಮೀರ್ ಕಾಪು, ಹರೀಶ್ ನಾಯಕ್, ಪಕ್ಷದ ವಿವಿಧ ಮುಖಂಡರು, ಎಲ್ಲಾ ಘಟಕ / ಸಮಿತಿಗಳ ಪದಾ„ಕಾರಿಗಳು, ಹಾಲಿ ಮತ್ತು ಮಾಜಿ ಜನಪ್ರತಿನಿ„ಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News