×
Ad

ಪುತ್ತೂರು: ರಸ್ತೆಗೆ ಬಿದ್ದ ಮರ; ವಾಹನ ಸಂಚಾರ ವ್ಯತ್ಯಯ

Update: 2020-08-20 17:59 IST

ಪುತ್ತೂರು: ರಸ್ತೆ ಅಡ್ಡಲಾಗಿ ಭ್ರಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮದಿಂದ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡ ಘಟನೆ ಗುರುವಾರ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನಾಜೆ ಎಂಬಲ್ಲಿ ನಡೆಯಿತು. 

ಗುರುವಾರ ಸಂಜೆ ವೇಳೆಗೆ ಮರವೊಂದು ಬುಡಸಹಿತ ರಸ್ತೆಗೆ ಉರುಳಿ ಬಿದ್ದಿದ್ದು, ಈ ಸಂದರ್ಭದಲ್ಲಿ ಇಲ್ಲಿ ಯಾವುದೇ ವಾಹನ ಹಾಗೂ ಜನ ಸಂಚಾರ ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆ ಸಂದರ್ಭ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಕೇವಲ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದೆ. ಮರ ಬೀಳುತ್ತಿರುವುದನ್ನು ಕಂಡ ಚಾಲಕ ತಕ್ಷಣವೇ ಕಾರು ನಿಲ್ಲಿಸಿದ ಕಾರಣ ಕಾರಿನ ಮುಂಬಾಗದಲ್ಲಿ ಮರ ಬಿದ್ದಿದ್ದು ಅನಾಹುತ ತಪ್ಪಿದೆ. ಮರ ಬಿದ್ದ ರಭಸಕ್ಕೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. 

ಇದರಿಂದಾಗಿ ಈ ರಸ್ತೆಯಲ್ಲಿ ಕೆಲಸ ಸುಮಾರು ಒಂದು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮೆಸ್ಕಾಂ ಪವರ್‍ಮ್ಯಾನ್‍ಗಳು ಮತ್ತು ಕಾರ್ಮಿಕರ ತಂಡ ಸ್ಥಳಕ್ಕೆ ಧಾವಿಸಿ ವಿದ್ಯುತ್ ತಂತಿಗೆ ಉಂಟಾದ ಹಾನಿ ಸರಿಪಡಿಸಿ ಮರದ ಗೆಲ್ಲುಗಳನ್ನು ತೆರವುಗೊಳಿಸಿದರು.  
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News