×
Ad

ಕೊಡೇರಿ ದೋಣಿ ದುರಂತದ ಮೃತರ ಮನೆಗೆ ಆ.21ರಂದು ಸಚಿವ ಕೋಟ ಭೇಟಿ

Update: 2020-08-20 18:10 IST

ಉಡುಪಿ, ಆ.20: ರಾಜ್ಯ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಬೈಂದೂರು ತಾಲೂಕು ಕೊಡೇರಿಯಲ್ಲಿ ಮೊನ್ನೆ ನಡೆದ ನಾಡದೋಣಿ ದುರಂತದಲ್ಲಿ ಮೃತಪಟ್ಟ ನಾಲ್ವರು ಮೀನುಗಾರರ ಮನೆಗಳಿಗೆ ಆ.21ರ ಶುಕ್ರವಾರ ಬೆಳಗ್ಗೆ 9:00ಗಂಟೆಗೆ ಭೇಟಿ ನೀಡಲಿದ್ದು, ಕುಟುಂಬಕ್ಕೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯ ಆದೇಶ ಪತ್ರವನ್ನು ಹಸ್ತಾಂತರಿಸಲಿದ್ದಾರೆ.

ಬಳಿಕ ಉಪ್ಪುಂದದಲ್ಲಿರುವ ರಾಣಿ ಬಲೆ ಒಕ್ಕೂಟದ ಕಚೇರಿಗೆ ಭೇಟಿ ನೀಡಿ ಮೀನುಗಾರರೊಂದಿಗೆ ಚರ್ಚಿಸಲಿದ್ದಾರೆ. 11:00 ಗಂಟೆಗೆ ಕುಂದಾಪುರದ ಸಹಾಯಕ ಆಯುಕ್ತರ ಕಚೇರಿ ಸಂಕೀರ್ಣದ ತನ್ನ ಕಚೇರಿಯಲ್ಲಿ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಡಿ ಮಂಜೂರಾದ ಪರಿಹಾರ ಧನದ ಚೆಕ್‌ಗಳನ್ನು ಸಂತ್ರಸ್ತ ಕುಟುಂಬಗಳಿಗೆ ಹಸ್ತಾಂತರಿಸಿದ ಬಳಿಕ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಅಪರಾಹ್ನ 12:00ಕ್ಕೆ ಅವರು ಕುಂದಾಪುರದಿಂದ ಬಂಟ್ವಾಳಕ್ಕೆ ತೆರಳಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News