×
Ad

ಅಂಬಲಪಾಡಿ ಬಾಲಗಣೇಶೋತ್ಸವ ಸಮಿತಿಯಿಂದ ಸರಳ ಗಣೇಶೋತ್ಸವ

Update: 2020-08-20 18:18 IST

ಉಡುಪಿ, ಆ.20:ನಗರದ ಅಂಬಲಪಾಡಿಯ ಶ್ರೀಬಾಲಗಣೇಶೋತ್ಸವ ಸಮಿತಿ ವತಿಯಿಂದ ಅಂಬಲಪಾಡಿಯಲ್ಲಿ ನಡೆಯುವ 44ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಈ ಬಾರಿ ಸರಳವಾಗಿ ಒಂದು ದಿನಕ್ಕೆ ಸೀಮಿತಗೊಂಡು ನಡೆಯಲಿದೆ.

ಅಂಬಲಪಾಡಿಯ ವಸಂತ ಮಂಟಪದ ಬಳಿ, ರಾಷ್ಟ್ರೀಯ ಹೆದ್ದಾರಿ ಸಮೀಪದ ಮೈದಾನದಲ್ಲಿ ನಡೆಯುವ ಈ ಬಾರಿಯ ಸಾರ್ವಜನಿಕ ಗಣೇಶೋತ್ಸವ ಕೊರೋನಾ ವೈರಸ್ ಭೀತಿಯಿಂದ ಸರಕಾರದ ಕಟ್ಟುಪಾಡಿನ ನಡುವೆ ಬಹಳ ಸೂಕ್ಷ ಹಾಗೂ ಸರಳವಾಗಿ ಒಂದೇ ದಿನ ನಡೆಯಲಿದೆ. ಸಾರ್ವಜನಿಕರು ಸಹರಿಸಬೇಕೆಂದು ಸಮಿತಿ ಅಧ್ಯಕ್ಷ ಪ್ರಶಾಂತ್ ಕೆ.ಎಸ್.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News