×
Ad

​ಉಡುಪಿ: ಮೃತ ಸ್ವಸಹಾಯ ಗುಂಪಿನ ಸದಸ್ಯೆ ಕುಟುಂಬಕ್ಕೆ ಪರಿಹಾರ ವಿತರಣೆ

Update: 2020-08-20 18:39 IST

ಉಡುಪಿ, ಆ.20: ಇತ್ತೀಚೆಗೆ ಅಪಘಾತದಿಂದ ಮೃತಪಟ್ಟ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಬ್ಯಾಂಕ್ ಪ್ರವರ್ತಿಸಲ್ಪಟ್ಟ ಅಂಬಲಪಾಡಿಯ ‘ಸೂರ್ಯೋದಯ’ ನವೋದಯ ಸ್ವ-ಸಹಾಯ ಗುಂಪಿನ ಸದಸ್ಯೆ ಮಮತಾ ಪೂಜಾರಿ ಕುಟುಂಬಕ್ಕೆ ಒಂದು ಲಕ್ಷ ರೂ. ಮೊತ್ತದಚೆಕ್‌ನ್ನು ಬುಧವಾರ ನೀಡಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಡಾ.ದೇವಿಪ್ರಸಾದ್ ಶೆಟ್ಟಿ ಮೃತರ ಪತಿ ಸುಧಾಕರ್ ಪೂಜಾರಿ ಅವರಿಗೆ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭ ಬ್ಯಾಂಕಿನ ಮುಖ್ಯ ಶಾಖೆಯ ಪ್ರಬಂಧಕ ಸುನಿಲ್ ಕುಮಾರ್, ನೇಕಾರ ಸಂಘದ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಕಾಂಚನ್, ಬ್ಯಾಂಕಿನ ಮೇಲ್ವಿಚಾರಕ ಹರಿನಾಥ್, ಬಾಲಕೃಷ್ಣ ಭಟ್, ಚಂದ್ರಶೇಖರ್, ಕೃಷ್ಣ ಸಾಲ್ಯಾನ್, ಸಿ.ಎಸ್.ಗೀತಾ ಶಿರ್ವ, ಗೀತಾ ಮೂಡುಬೆಳ್ಳೆ, ಸುಮಿತ್ರಾ, ಒಕ್ಕೂಟ ಉಪಾಧ್ಯಕ್ಷ ಶಕಿಲಾ ಡಿ.ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News