×
Ad

ಉಡುಪಿ: ಮಹಿಳಾ ಕಾಂಗ್ರೆಸ್‌ನಿಂದ ವಿದ್ಯಾರ್ಥಿನಿಗೆ ಮೊಬೈಲ್ ವಿತರಣೆ

Update: 2020-08-20 19:12 IST

ಉಡುಪಿ, ಆ.20: ಉಡುಪಿ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಜನ್ಮದಿನಾಚರಣೆಯಲ್ಲಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ಬೈಂದೂರು ಕಿರಿಮಂಜೇಶ್ವರದ ದೃಷ್ಟಿಹೀನ ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿ ಮೇಘನಾ ಅವರಿಗೆ ಆನ್‌ಲೈನ್ ತರಗತಿಗೆ ಸಹಾಯವಾಗಲು ಸ್ಮಾರ್ಟ್ ಫೋನನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಗೀತಾ ವಾಗ್ಳೆ ಮಾತನಾಡಿ, ಬಡತನದ ನಡುವೆ ದೃಷ್ಟಿದೋಷದ ಸಮಸ್ಯೆಯಿಂದ ಬಳಲುತ್ತಿದ್ದರೂ, ಅದನ್ನು ಮೆಟ್ಟಿನಿಂತು ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಮೇಘನಾ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ನಗರಸಭೆಯ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಮೇಘನಾ ಅವರ ಪರಿಚಯ ಮಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ ಸನ್ಮಾನಿಸಿದರು. ಮಾಜಿ ಶಾಸಕ ಯು.ಆರ್.ಸಭಾಪತಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಹಿರಿಯ ನಾಯಕ ಎಂ.ಎ.ಗಫೂರ್, ಮುಖಂಡ ರಾದ ವಿಶ್ವಾಸ್ ಅಮೀನ್, ರೋಶನಿ ಒಲಿವರ್, ಡಾ.ಸುನೀತಾ ಶೆಟ್ಟಿ, ಚಂದ್ರಿಕಾ ಶೆಟ್ಟಿ, ಸಂಧ್ಯಾ ಶೆಟ್ಟಿ, ಗೋಪಿ ನಾಯ್ಕ್, ಚಂದ್ರಾವತಿ ಭಂಡಾರಿ, ಸುಗಂಧಿ ಶೇಖರ್, ಸರಸು ಡಿ.ಬಂಗೇರಾ, ರಾಜೀವಿ, ಜ್ಯೋತಿ ಮೆನನ್, ಪ್ರಮೀಳಾ ಜತ್ತನ್ನ, ಸುಮಾ ಸುರೇಂದ್ರ, ರಮಾದೇವಿ, ಹರೀಶ್ ಕಿಣಿ, ಪ್ರಶಾಂತ್ ಜತ್ತನ್ನ, ಮುರಳಿ ಶಟ್ಟಿ, ಯತೀಶ್ ಕರ್ಕೇರಾ, ನರಸಿಂಹಮೂರ್ತಿ, ಭಾಸ್ಕರ ರಾವ್ ಕಿದಿಯೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News