ಉಡುಪಿ: ವಿದ್ಯುತ್ ತಗಲಿ ಮೃತಪಟ್ಟ ಕೃಷಿಕನ ಕುಟುಂಬಕ್ಕೆ ಪರಿಹಾರ ವಿತರಣೆ
Update: 2020-08-20 21:30 IST
ಉಡುಪಿ, ಆ.20: ಕೃಷಿ ಕೆಲಸ ಮಾಡುವಾಗ ವಿದ್ಯುತ್ ತಗಲಿ ಮೃತಪಟ್ಟಿದ್ದ ಚೇರ್ಕಾಡಿ ಗ್ರಾಪಂ ವ್ಯಾಪ್ತಿಯ ಕೃಷಿಕ ಸಾಧು ಅವರ ಕುಟುಂಬಕ್ಕೆ ಮೆಸ್ಕಾಂ ಇಲಾಖೆಯಿಂದ ಐದು ಲಕ್ಷ ರೂ. ಮೊತ್ತದ ಪರಿಹಾರ ಧನದ ಚೆಕ್ಕನ್ನು ಗುರುವಾರ ವಿತರಿಸಲಾಯಿತು.
ಮೃತ ಸಾಧು ಅವರ ಪತ್ನಿ ಗೌರಿ ಅವರಿಗೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮೆಸ್ಕಾಂನ ಅಧೀಕ್ಷಕ ಅಭಿಯಂತರ ನರಸಿಂಹ ಪಂಡಿತ್, ಕಾರ್ಯನಿರ್ವಾಹಕ ಅಭಿಯಂತರ ದಿನೇಶ್ ಉಪಾಧ್ಯಾಯ, ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಶಾಂತ್ ಪುತ್ರನ್, ಚೇರ್ಕಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ಕಿಟ್ಟಪ್ಪ ಅಮೀನ್, ಗ್ರಾಪಂ ಮಾಜಿ ಸದಸ್ಯರುಗಳಾದ ಸುರೇಶ್ ಪೂಜಾರಿ, ಸುಶೀಲಾ ಉಪಸ್ಥಿತರಿದ್ದರು.