2 ಹೊಸ ಕ್ಷಿಪಣಿಗಳನ್ನು ಪ್ರದರ್ಶಿಸಿದ ಇರಾನ್

Update: 2020-08-20 17:36 GMT

ದುಬೈ (ಯುಎಇ), ಆ. 20: ಇರಾನ್ ತನ್ನ ಕ್ಷಿಪಣಿ ಕಾರ್ಯಕ್ರಮಗಳನ್ನು ನಿಲ್ಲಿಸಬೇಕೆಂಬ ಅಮೆರಿಕದ ಬೇಡಿಕೆಗಳನ್ನು ಧಿಕ್ಕರಿಸಿರುವ ಇರಾನ್ ಗುರುವಾರ ಮೇಲ್ಮೈಯಿಂದ ಮೇಲ್ಮೈಗೆ ಹಾರುವ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಪ್ರದರ್ಶಿಸಿದೆ.

‘‘ಮೇಲ್ಮೈಯಿಂದ ಮೇಲ್ಮೈಗೆ ಹಾರುವ ಕ್ಷಿಪಣಿಗೆ ಹುತಾತ್ಮ ಖಾಸಿಮ್ ಸುಲೈಮಾನಿ ಹೆಸರನ್ನು ಇಡಲಾಗಿದೆ ಹಾಗೂ ಅದು 1,400 ಕಿ.ಮೀ. ಹಾರಾಟ ವ್ಯಾಪ್ತಿಯನ್ನು ಹೊಂದಿದೆ. ಕ್ರೂಸ್ ಕ್ಷಿಪಣಿಗೆ ಹುತಾತ್ಮ ಅಬು ಮಹ್ದಿ ಹೆಸರನ್ನು ಇಡಲಾಗಿದೆ ಹಾಗೂ ಅದು 1,000 ಕಿ.ಮೀ.ಗಿಂತಲೂ ಹೆಚ್ಚಿನ ಹಾರಾಟ ವ್ಯಾಪ್ತಿಯನ್ನು ಹೊಂದಿದೆ’’ ಎಂದು ಇರಾನ್ ರಕ್ಷಣಾ ಸಚಿವ ಅಮೀರ್ ಹತಾಮಿ ಟೆಲಿವಿಶನ್‌ನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News