×
Ad

ಕಡಂಬು: ಎಸ್ ಡಿಪಿಐ ಯಿಂದ ‘ಆಯುಷ್ಮಾನ್ ಆರೋಗ್ಯ ಕಾರ್ಡ್’ ನೋಂದಣಿ ಅಭಿಯಾನ

Update: 2020-08-21 18:52 IST

ವಿಟ್ಲ, ಆ.21: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಡಂಬು ಘಟಕದ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ 'ಆಯುಷ್ಮಾನ್ ಆರೋಗ್ಯ ಕಾರ್ಡ್' ನೋಂದಣಿ ಅಭಿಯಾನವು ಇಂದು ಕಡಂಬು ಎಸ್ ಡಿಪಿಐ ಕಚೇರಿಯಲ್ಲಿ ನಡೆಯಿತು.

ಕಡಂಬು ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಬಿ.ಎಂ ಹಸೈನಾರ್ ತಮ್ಮ ಹೆಸರನ್ನು ನೋಂದಾಯಿಸುವ ಮೂಲಕ  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ ಡಿಪಿಐ ಬಂಟ್ವಾಳ ವಿಧಾನ ಸಭಾ ಸಮಿತಿ  ಪ್ರಧಾನ ಕಾರ್ಯದರ್ಶಿ ಖಲಂದರ್ ಪರ್ತಿಪ್ಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಸೀದಿ ಆಡಳಿತ ಸಮಿತಿಯ ಪ್ರ. ಕಾರ್ಯ ದರ್ಶಿ ಮಹಮ್ಮದ್ ಬೆದ್ರಕ್ಕಾಡು, ಎಸ್ ಎಸ್ ಎಫ್ ಕಡಂಬು ಘಟಕ ಅಧ್ಯಕ್ಷ ಶರೀಫ್, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಅಬೂಬಕರ್ ಕಡಂಬು , ಎಸ್ ಡಿಪಿಐ ಕಡಂಬು ಘಟಕ ಅಧ್ಯಕ್ಷ ಖಾದರ್ ಬೆದ್ರಕ್ಕಾಡು ಹಾಗೂ  ಪ್ರ. ಕಾರ್ಯದರ್ಶಿ ಝಕಾರಿಯಾ ಆಟೋ,  ಮುಂತಾದ ಗಣ್ಯ ವ್ಯಕ್ತಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಎಸ್ ಡಿಪಿಐ ವಿಟ್ಲ ಪಡ್ನೂರು ವಲಯ ಸಮಿತಿ ಅಧ್ಯಕ್ಷ ಮಹಮೂದ್ ಕಡಂಬು ಪ್ರಾಸ್ತಾವಿಕವಾಗಿ ಮಾತನಾಡಿದರು.  ನವಾಝ್ ಬೆದ್ರಕ್ಕಾಡು ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News