ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ: ಕಡತ ವಿಲೇವಾರಿಗೆ ದಿನಾಂಕ ನಿಗಧಿ
Update: 2020-08-21 20:09 IST
ಉಡುಪಿ, ಆ.21: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಡತಗಳನ್ನು ವಿಲೇವಾರಿ ಮಾಡುವ ಸಂಬಂಧ ಪ್ರಾಧಿಕಾರದ ಅಧ್ಯಕ್ಷರು ದಿನಗಳನ್ನು ನಿಗದಿ ಮಾಡಿದ್ದಾರೆ.
ಸಾರ್ವಜನಿಕರಿಗೆ ಆಗುವ ಯಾವುದೇ ತೊಂದರೆಯನ್ನು ತಪ್ಪಿಸಿ ಕಡತಗಳನ್ನು ಸಾರ್ವಜನಿಕರಿಗೆ ಕ್ಲಪ್ತ ಸಮಯದಲ್ಲಿ ವಿಲೇವಾರಿ ಮಾಡಲು ಪ್ರತಿಯೊಂದು ಕಡತಕ್ಕೆ ದಿನಾಂಕವನ್ನು ನಿಗದಿ ಮಾಡಲಾಗಿದೆ. ಇದರಂತೆ ಕಟ್ಟಡ ಪ್ರಾರಂಭಿಕ ಪ್ರಮಾಣ ಪತ್ರಕ್ಕೆ 30 ದಿವಸ, ಏಕ ವಿನ್ಯಾಸ ಅನುಮೋದನೆಗೆ 30 ದಿವಸ, ಭೂಪರಿವರ್ತನೆಗೆ ತಾಂತ್ರಿಕ ಅಭಿಪ್ರಾಯ 30 ದಿವಸ ಹಾಗೂ ವಲಯ ದೃಢಪತ್ರಕ್ಕೆ 15 ದಿವಸಗಳ್ನು ನಿಗದಿ ಮಾಡಲಾಗಿದೆ.
ಈ ಅವಧಿಯ ಒಳಗೆ ಸಾರ್ವಜನಿಕರ ಕಡತಗಳು ವಿಲೇವಾರಿ ಆಗದಿದ್ದಲ್ಲಿ ಪ್ರಾಧಿಕಾರದ ಆಯುಕ್ತರು/ಅಧಕ್ಷರನ್ನು ಸಂಪರ್ಕಿಸಬಹುದು ಎಂದು ಪ್ರಾಧಿಕಾರ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.