ಶಂಕರಪುರ: ಕೊರೋನ ವಾರಿಯರ್ಸ್‌ಗಳಿಗೆ ಗೌರವಾರ್ಪಣೆ
ಶಿರ್ವ, ಆ.21: ಶಂಕರಪುರ ಸೈಂಟ್ ಜೋನ್ಸ್ ಚರ್ಚ್, ಅಂತರ್ ಧರ್ಮೀಯ ಆಯೋಗ, ಕಥೊಲಿಕ್ ಸಭಾ ಘಟಕ, ಸ್ತ್ರೀ ಆಯೋಗ, ಸ್ವಾಸ್ಥ ಆಯೋಗ ಘಟಕಗಳ ಸಹಭಾಗಿತ್ವದಲ್ಲಿ ಕೊರೋನಾ ಸೇನಾನಿಗಳಿಗೆ ಗೌರವಾ ರ್ಪಣೆ ಕಾರ್ಯಕ್ರಮವನ್ನು ಮಂಗಳವಾರ ಚರ್ಚ್ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿತ್ತು.
ಚರ್ಚ್‌ನ ಧರ್ಮಗುರು ರೆ.ಫಾ.ಫರ್ಡಿನಾಂಡ್ ಗೊನ್ಸಾಲ್ವಿಸ್, ಆಶಾ ಕಾರ್ಯಕರ್ತೆಯರನ್ನು ಗೌರವಿಸಿ ಅವರ ಸೇವೆಯನ್ನು ಸ್ಮರಿಸಿದರು. ಮೂಡ ಬೆಟ್ಟು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶೈನಿ, ಕಟಪಾಡಿ ಗ್ರಾಮ ಕರಣಿಕ ಡೇನಿಯಲ್ ಡಿಸೋಜ, ಕುರ್ಕಾಲು ಗ್ರಾಮ ಕರಣಿಕ ಲೆಸ್ಟರ್ ಕರ್ನೇಲಿಯೊ, ಇನ್ನಂಜೆ ಗ್ರಾಮಕರಣಿಕ ಅವಿನಾಶ್, ಕಟಪಾಡಿ ಪೋಲಿಸ್ ಠಾಣಾ ಸಿಬ್ಬಂದಿ ಗಳಾದ ಲಕ್ಷ್ಮಣ್, ಮೋಹನ್‌ಚಂದ್ರ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಜಾನ್ ರೊಡ್ರಿಗಸ್, ಕಾರ್ಯದರ್ಶಿ ಅನಿತಾ ರಿಚಾರ್ಡ್, 18 ಆಯೋಗಗಳ ಸಂಯೋಜಕಿ ಸೀಮಾ ಮಾರ್ಗರೆಟ್, ನವೀನ್ ಅಮೀನ್, ಗೀತಾ ಕ್ರಾಸ್ತಾ ಉಪಸ್ಥಿತರಿದ್ದರು.
ಆಗ್ನೇಸ್ ಡೇಸಾ ಸ್ವಾಗತಿಸಿದರು. ಸಮೀರಾ ಕಾರ್ಯಕ್ರಮ ನಿರೂಪಿಸಿದರು. ಜರೋಮ್ ವಂದಿಸಿದರು.