ಕೋಳಿ ಅಂಕ : ಏಳು ಮಂದಿಯ ಬಂಧನ
Update: 2020-08-21 20:31 IST
ಶಿರ್ವ, ಆ.21: ಕುರ್ಕಾಲು ಗ್ರಾಮದ ಪಾಜೈ ಎಂಬಲ್ಲಿ ಆ.20ರಂದು ಮಧ್ಯಾಹ್ನ ವೇಳೆ ಕೋಳಿ ಅಂಕಕ್ಕೆ ದಾಳಿ ನಡೆಸಿದ ಶಿರ್ವ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
ಸದಾನಂದ ಪೂಜಾರಿ(55), ಶ್ರೀಶಾ(24), ದಾಮೋದರ(39), ಕೃಷ್ಣ(25), ವಿಜಯ(43), ಪಾಂಡು(37), ಸುಧಾಕರ(50) ಬಂಧಿತ ಆರೋಪಿ ಗಳು. ಬಂಧಿತರಿಂದ 3000 ರೂ. ನಗದು, ಆರು ಕೋಳಿಗಳು, ಎರಡು ಬಾಳು, ಎರಡು ಅಟೋ ರಿಕ್ಷಾ, ಒಂದು ಕಾರು, ಏಳು ದ್ವಿಚಕ್ರ ವಾಹನ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಶಿರ್ವ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.