ಗಾಂಜಾ ಸೇವನೆ: ಇಬ್ಬರು ವಶಕ್ಕೆ
Update: 2020-08-21 20:32 IST
ಕುಂದಾಪುರ, ಆ.21: ಕುಂದಾಪುರ ಹೊಸ ಬಸ್ ನಿಲ್ದಾಣದ ಬಳಿ ಆ.20 ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ಗಾಂಜಾ ಸೇವಿಸುತ್ತಿದ್ದ ಇಬ್ಬರನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಾದ ಹೆಮ್ಮಾಡಿ ಗ್ರಾಮದ ಕಟ್ಬೇಲ್ತೂರು ಸುಳ್ಸೆ ನಿವಾಸಿ ನಾಗರಾಜ ಪೂಜಾರಿ(34) ಹಾಗೂ ಕುಂಭಾಶಿ ಕೊರವಡಿ ಕ್ರಾಸ್ ನಿವಾಸಿ ಆಕಾಶ್ ಎಸ್.ಪೂಜಾರಿ(23) ಎಂಬವರನ್ನು ಮಣಿಪಾಲ ಕೆಎಂಸಿಯ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ತಜ್ಞರ ಮುಂದೆ ಹಾಜರುಪಡಿಸಿ, ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಈ ವರದಿಯಲ್ಲಿ ಆರೋಪಿಗಳು ಗಾಂಜಾ ಸೇವನೆ ಮಾಡಿ ರುವುದು ದೃಢಪಟ್ಟಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.