ಕಟಪಾಡಿಯಲ್ಲಿ ಜಿಲ್ಲಾಮಟ್ಟದ ಭಕ್ತಿಸಂಗೀತ ಸ್ಪರ್ಧೆ
Update: 2020-08-21 20:34 IST
ಉಡುಪಿ, ಆ.21: ಜೆಸಿಐ ಕಟಪಾಡಿಯ ವತಿಯಿಂದ ಪ್ರತಿ ವರ್ಷದಂತೆ ಶ್ರೀಗಣೇಶ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಉಡುಪಿ ಜಿಲ್ಲಾಮಟ್ಟದ ಭಕ್ತಿ ಸಂಗೀತ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
5ರಿಂದ 9ವರ್ಷದವರೆಗೆ ಕಿರಿಯ, 10ರಿಂದ 12ವರ್ಷದವರೆಗೆ ಹಿರಿಯ ಹಾಗೂ 13ರಿಂದ 15ವರ್ಷದವರೆಗೆ ಪ್ರೌಢವೆಂದು ಒಟ್ಟು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿವೆ. ಸ್ಪರ್ಧಾಳುಗಳು ತಮ್ಮ ಹಾಡುಗಾರಿಕೆಯ ವೀಡಿಯೋ ಮುದ್ರಿತ ಭಕ್ತಿಗೀತೆಯನ್ನು (ಮೂರು ನಿಮಿಷ ಮೀರದಂತೆ) ತಮ್ಮ ಜನನ ದಿನಾಂಕದ ದಾಖಲೆ ಇರುವ ಗುರುತು ಪತ್ರದ ಜೊತೆಗೆ ಇದೇ ಆ.30ರ ಒಳಗೆ ಕಳುಹಿಸುವಂತೆ ಕೋರಲಾಗಿದೆ.
ಹೆಚ್ಚಿನ ವಿವರಗಳಿಗೆ ಕಾರ್ಯಕ್ರಮ ನಿರ್ದೇಶಕರ ದೂರವಾಣಿ ಸಂಖ್ಯೆ:9481760411ನ್ನು ಸಂಪರ್ಕಿಸುವಂತೆ ಜೆಸಿಐ ಕಟಪಾಡಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.