×
Ad

ಕೊರೋನ ಸೋಂಕಿತ ಸರಾಸರಿ ನಾಲ್ವರಲ್ಲಿ ಮೂವರು ಗುಣಮುಖ: ಕೇಂದ್ರ ಸರಕಾರ

Update: 2020-08-21 21:12 IST

ಹೊಸದಿಲ್ಲಿ, ಆ. 21: ಕೊರೋನ ಸೋಂಕಿತ 62,282 ಮಂದಿ ಗುಣಮುಖರಾಗಿ ಬಿಡುಗಡೆಯಾಗುವುದರೊಂದಿಗೆ ದೇಶದಲ್ಲಿ ಕೊರೋನದಿಂದ ಚೇತರಿಕೆಯಾಗುತ್ತಿರುವವರ ಪ್ರಮಾಣ ಇಂದು ಶೇ. 74ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಒಟ್ಟು 21.5 ಲಕ್ಷ ಕೊರೋನ ಸೋಂಕಿತರು ಗುಣಮುಖರಾಗಿದ್ದು, ಮರಣ ಪ್ರಮಾಣ ಶೇ. 1.89ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆಸ್ಪತ್ರೆಯಲ್ಲಿದ್ದ ಹಾಗೂ ಮನೆಯಲ್ಲಿ ಐಸೋಲೇಶನ್‌ನಲ್ಲಿ ಇದ್ದ ಅತ್ಯಧಿಕ ಕೊರೋನ ಸೋಂಕಿತರು ಗುಣಮುಖರಾಗಿದ್ದಾರೆ. ಇದರೊಂದಿಗೆ ಚೇತರಿಕೆಯಾದವರ ಸಂಖ್ಯೆ 21,58,946ಕ್ಕೆ ಏರಿಕೆಯಾಗಿದೆ.

ಕೊರೋನ ಸೋಂಕಿನ ಸಕ್ರಿಯ ಪ್ರಕರಣಗಳು 14,66,918ರ ಗಡಿ ದಾಟಿದೆ. ಕೊರೋನ ಸೋಂಕಿತರ ಗುಣಮುಖ ಪ್ರಮಾಣ ಜೂನ್ 17ರಂದು ಶೇ. 52.8 ಇತ್ತು. ಜುಲೈ 16ರಂದು ಅದರ ಪ್ರಮಾಣ 63.24ಕ್ಕೆ ಏರಿಕೆಯಾಗಿತ್ತು. ಇಂದು ಶೇ. 74.30ಕ್ಕೆ ಏರಿಕೆಯಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News