ಬಿ.ಎಂ. ಹುಸೈನ್ ನಿಧನ
Update: 2020-08-21 21:28 IST
ಉಡುಪಿ, ಆ.21: ಕಲ್ಯಾಣಪುರ ಸಂತೆಕಟ್ಟೆ ಸಬೀನಾ ಕಾಂಪ್ಲೆಕ್ಸ್‌ನ ಬಿ.ಎಂ. ಹುಸೇನ್(76) ಆ.21ರಂದು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆ ಯಲ್ಲಿ ನಿಧನರಾದರು.
ಪ್ರಸ್ತುತ ಅಂಬಲಪಾಡಿ ಸ್ಟಾರ್ ಸಾಯಿರಾಧಾ ನಿವಾಸಿ ಆಗಿರುವ ಇವರು, ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.