ಸದ್ಯದ ಸನ್ನಿವೇಶದಲ್ಲಿ ಜಿಡಿಪಿ ಅಂದಾಜು ದರಗಳನ್ನು ನೀಡುವುದು ತೀರಾ ಕಷ್ಟ: ಆರ್ ಬಿಐ ಗವರ್ನರ್

Update: 2020-08-21 16:52 GMT

  ಹೊಸದಿಲ್ಲಿ, ಆ22: ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಅಂದಾಜು ಅಂಕಿಅಂಶಗಳನ್ನು ನೀಡುವಾಗ ಭಾರತೀಯ ರಿಸರ್ವ್ ಬ್ಯಾಂಕ್ ‘ಸುರಕ್ಷಿತ ಆಟ’ ಆಡುವ ತಂತ್ರಗಾರಿಕೆಯನ್ನು ಅನುಸರಿಸುತ್ತಿಲ್ಲ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್‌ ದಾಸ್ ಶುಕ್ರವಾರ ತಿಳಿಸಿದ್ದಾರೆ.

ಕೊರೋನ ಸಾಂಕ್ರಾಮಿಕ ಹಾಗೂ ಪ್ರಸಕ್ತ ಆರ್ಥಿಕ ಸನ್ನಿವೇಶದ ಬಗ್ಗೆ ಸ್ಪಷ್ಟವಾದ ಚಿತ್ರಣ ದೊರೆತ ಆನಂತರವೇ ಆರ್‌ಬಿಐ, ಜಿಡಿಪಿ ಅಂದಾಜುದರಗಳನ್ನು ಪ್ರಕಟಿಸುವುದನ್ನು ಆರಂಭಿಸಲಿದೆಯೆಂದು ಅವರು ಹೇಳಿದ್ದಾರೆ.

 ಸಿಎನ್‌ಬಿಸಿ ಆವಾಝ್ ಸುದ್ದಿವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತದ ಕ್ರೆಡಿಟ್ (ಸಾಲ ನೀಡಿಕೆ)-ಜಿಡಿಪಿ ಅನುಪಾತವು ತೀರಾ ಕಡಿಮೆಯಾಗಿದ್ದು, ಅದು ಹೆಚ್ಚಾಗಬೇಕೆಂದು ತಜ್ಞರು ಅಭಿಪ್ರಾಯಿಸಿದ್ದಾ ಎಂದು ಹೇಳಿದರು..

  ‘‘ಪ್ರಸಕ್ತ ಸನ್ನಿವೇಶದಲ್ಲಿ ಜಿಡಿಪಿ ಅಂದಾಜು ದರಗಳನ್ನು ನೀಡುವುದು ತೀರಾ ಕಷ್ಟ. ಜಿಡಿಪಿ ಅಂದಾಜು ದರಗಳನ್ನು ಆರ್‌ಬಿಐಯು ಆಗೊಮ್ಮೆ, ಈಗೊಮ್ಮೆ ಬದಲಾಯಿಸುವುದಕ್ಕೆ ಸಾಧ್ಯವಿಲ್ಲ’’ ಎಂದು ದಾಸ್ ಹೇಳಿದರು.

  ಕೊರೋನ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾದಲ್ಲಿ ಅಥವಾ ಹೊಸ ಲಸಿಕೆ ಪತ್ತೆಯಾದಲ್ಲಿ ದೇಶದ ಆರ್ಥಿಕತೆ ಚೇತರಿಕೆಗೊಳ್ಳಲಿದೆ ಎಂದು ಅವರು ಹೇಳಿದರು.

ಕಾರ್ಪೊರೇಟ್ ಸಾಲ ನೀಡಿಕೆಗೆ ಸಂಬಂಧಿಸಿ ನೂತನ ಆರ್ಥಿಕ ಮಾನದಂಡಗಳನ್ನು ಕೆ.ವಿ.ಕಾಮತ್ ನೇತೃತ್ವದ ಆಯೋಗವು ಶೀಘ್ರದಲ್ಲೇ ಘೋಷಿಸಲಿದೆಯೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News