×
Ad

ಮೊಬೈಲ್ ಕಳ್ಳತನ ಆರೋಪಿಸಿ ತಂಡದಿಂದ ಯುವಕನಿಗೆ ಹಲ್ಲೆ: ವೀಡಿಯೊ ವೈರಲ್

Update: 2020-08-21 22:29 IST

ಬಂಟ್ವಾಳ, ಆ. 21: ಮೊಬೈಲ್ ಕಳ್ಳತನ ನಡೆಸಿದ್ದಾನೆ ಎಂದು ಆರೋಪಿಸಿ ಯುವಕನೋರ್ವನಿಗೆ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ತಾಲೂಕಿನ ಕಲ್ಲಡ್ಕ ಪಮೀಪದ ಪರನೀರು ಎಂಬಲ್ಲಿ ನಡೆದಿದ್ದು, ಈ ಸಂಬಂಧ ಹಲ್ಲೆ ನಡೆಸಿದ ತಂಡದ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಬಾಳ್ತಿಲ ಗ್ರಾಮದ ನಿವಾಸಿ ಹಲ್ಲೆಗೊಳಗಾದ ಉದಯ ಎಂಬಾತ ಪೊಲೀಸರಿಗೆ ದೂರು ನೀಡಿದ್ದು, ವೀರಕಂಭ ನಿವಾಸಿ ಶ್ರೀನಿವಾಸ, ಕಲ್ಲಡ್ಕ ನಿವಾಸಿ ಪ್ರಶಾಂತ್ ಹಾಗೂ ಇತರ ಕೆಲವರು ಇದ್ದ ತಂಡ ಹಲ್ಲೆ ನಡೆಸಿದೆ. ಹಲ್ಲೆ ನಡೆಸಿರುವ ತಂಡ ಜೀವ ಬೆದರಿಕೆ ಒಡ್ಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಯುವಕನಿಗೆ ಹಲ್ಲೆ ನಡೆಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಹಲ್ಲೆ ನಡೆಸಿರುವ ತಂಡದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮನೆಯೊಂದರಿಂದ ಮೊಬೈಲ್ ಕದ್ದಿರುವುದಾಗಿ ಆರೋಪಿಸಿ ತಂಡ ಯುವಕನನ್ನು ಕಲ್ಲಡ್ಕದ ಪರನೀರು ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಹಲ್ಲೆ ನಡೆಸಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News