×
Ad

ಬಿಎಸ್ಸೆನ್ನೆಲ್ ಪಿಂಚಣಿದಾರರ ಸಂಘದ ವಾರ್ಷಿಕ ಸಭೆ

Update: 2020-08-21 22:29 IST

ಮಂಗಳೂರು, ಆ.21: ಅಖಿಲ ಭಾರತ ಬಿಎಸ್ಸೆನ್ನೆಲ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಅಸೋಸಿಯೇಶನ್‌ನ 11ನೇ ವರ್ಷದ ಸಮಾರಂಭವು ಸರಳ ರೀತಿಯಲ್ಲಿ ಬಿಎಸ್ಸೆನ್ನೆಲ್‌ನ ಕೇಂದ್ರ ಕಚೇರಿಯಲ್ಲಿ ನಡೆಯಿತು.

ಈ ಸಂದರ್ಭ ದಕ್ಷಣ ಕನ್ನಡ ಜಿಲ್ಲಾ ಟೆಲಿಕಾಂ ವೃತ್ತದ ಜನರಲ್ ಮ್ಯಾನೇಜರ್ ಆಗಿ ನೇಮಕಗೊಂಡಿರುವ ಎ.ಎಸ್. ಸುಕುಮಾರನ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ನೂತನ ಜನರಲ್ ಮ್ಯಾನೇಜರ್ ಸುಕುಮಾರನ್ ಮಾತನಾಡಿ, ಬಿಎಸ್ಸೆನ್ನೆಲ್ ಗ್ರಾಹಕರಿಗೆ ಮೊಬೈಲ್ ಮತ್ತು ಫೈಬರ್ ಸೇವೆಯಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ವರ್ಗದವರ ಜೊತೆ ಸೇರಿ ಸೇವೆ ನೀಡುವುದಾಗಿ ತಿಳಿಸಿದರು.

ಬಿಎಸ್ಸೆನ್ನೆಲ್ ಉತ್ಪಾದನೆಯನ್ನು ಮಾರಾಟ ಮಾಡುವ ಅಂಗಡಿಗಳಿಗೆ ಕ್ಲಪ್ತ ಸಮಯದಲ್ಲಿ ಸಹಕಾರ ನೀಡಲು ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು. ಬಿಎಸ್ಸೆನ್ನೆಲ್ ಪುನಶ್ಚೇತನದ ಬಗ್ಗೆ ಪಿಂಚಣಿದಾರರ ಸಂಪೂರ್ಣ ಸಹಕಾರ ನೀಡುವಂತೆ ವಿನಂತಿಸಿದರು. ಬಿಎಸ್ಸೆನ್ನೆಲ್ ಉಳಿಸುವಲ್ಲಿ ಪಿಂಚಣಿದಾರರಾದ ನಾವು ಕೂಡ ಸಹಕಾರ ನೀಡುತ್ತೇವೆ ಎಂದು ಅಧ್ಯಕ್ಷರು ಮತ್ತು ಕಾರ್ಯದರ್ಶಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಸೋಸಿಯೇಶನ್‌ನ ಜಿಲಾ ್ಲಅಧ್ಯಕ್ಷ ಎಚ್.ರಾಮಕೃಷ್ಣ, ಜಿಲ್ಲಾ ಕಾರ್ಯದರ್ಶಿ ಕೆ.ಚಂದ್ರಮೋಹನ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೋಹನ, ರಾಜ್ಯದ ಉಪಾಧ್ಯಕ್ಷ ಅನಿಲ್ ಕುಮಾರ್ ಹಾಗೂ ಬಿ.ಶ್ರೀನಿವಾಸ, ಕೆ.ಶಶಿಕಲಾ, ಮೋಲಿ ಮಿರಾಂಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News