×
Ad

ನಾಟೆಕಲ್ ನಲ್ಲಿ ಸರಣಿ ಕಳ್ಳತನ : ಆರು‌ ಅಂಗಡಿಗಳಿಂದ ಕಳವು

Update: 2020-08-21 22:35 IST

ಕೊಣಾಜೆ : ಕೊಣಾಜೆ ಠಾಣಾ ವ್ಯಾಪ್ತಿಯ ನಾಟೆಕಲ್ ಬಳಿಯ ಆರು ಅಂಗಡಿಗಳಿಗೆ ಕಳ್ಳರು ನುಗ್ಗಿ ಕಳ್ಳತನ ನಡೆಸಿರುವ ಘಟನೆ ಶುಕ್ರವಾರ ಮುಂಜಾನೆ ಬೆಳಕಿಗೆ ಬಂದಿದೆ.

ನಾಟೆಕಲ್ ಎರಡು ಸುಪರ್ ಬಝಾರ್, ಹಾರ್ಡ್‌ ವೇರ್ ಅಂಗಡಿ, ಬೇಕರಿ, ಟಯರ್ ಅಂಗಡಿ, ಹಾಲಿನ ಡೈರಿ, ಚಿಕನ್ ಅಂಗಡಿ ಗಳ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಕೆಲವೊಂದು ಅಂಗಡಿಗಳಲ್ಲಿ ಇಟ್ಟಿದ್ದ ನಗದನ್ನು ದೋಚಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟು‌  ಮೊತ್ತ 15,000 ರೂ.‌ ನಗದು ದೋಚಿದ್ಚಾರೆ. ಈ ಬಗ್ಗೆ ಕೊಣಾಜೆ ಪೊಲೀಸರು ಪರೀಶೀಲನೆ ನಡೆಸಿದ್ದು ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆಯೂ ಕಳವು ಯತ್ನ ನಡೆದಿತ್ತು: ನಾಟೆಕಲ್ ನಲ್ಲಿ‌ ಕಳೆದ ಕೆಲವು ತಿಂಗಳ ಹಿಂದೆ ಬ್ಯಾಂಕ್ ಒಂದರ ಬಾಗಿಲು ಮುರಿದು ಕಳವಿಗೆ ಯತ್ನಿಸಿದ್ದು, ಸೈರನ್ ಆದಾಗ ಅಲ್ಲಿಂದ ಪರಾರಿಯಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News